ಕನ್ನಡ ರಾಜ್ಯೋತ್ಸವಕ್ಕೆ ಎಲ್ಲರೂ ಒಂದಲ್ಲ ರೀತಿಯಲ್ಲಿ ತಯಾರಾಗುತ್ತಾರೆ. ಚಿತ್ರರಂಗದವರಂತೂ ವಿಶೇಷವಾಗಿಯೇ ರಾಜ್ಯೋತ್ಸವವನ್ನು ಸಂಭ್ರಮಿಸುತ್ತಾರೆ. ಶ್ರದ್ಧಾ ಶ್ರೀನಾಥ್ ಹಾಗೂ ಶಾನ್ವಿ ಶ್ರೀವಾಸ್ತವ್ ಕನ್ನಡ ರಾಜ್ಯೋತ್ಸವಕ್ಕೆ ನಮಿಸುತ್ತಿರುವ ರೀತಿಯೇ ವಿಶೇಷ.
ಇಬ್ಬರೂ ಸೇರಿಕೊಂಡು ಒಂದು ವಿಡಿಯೋ ಮಾಡಿದ್ದಾರೆ. ಡಾ.ರಾಜ್, ವಿಷ್ಣು, ಶಂಕರ್‍ನಾಗ್, ಅಂಬರೀಷ್, ರವಿಚಂದ್ರನ್, ಶಿವರಾಜ್ ಕುಮಾರ್, ಸುದೀಪ್, ದರ್ಶನ್, ಪುನೀತ್ ಸೇರಿದಂತೆ ಒಟ್ಟು 14 ಕನ್ನಡ ಕಲಾವಿದರ ಹಾಡುಗಳ ತುಣುಕುಗಳಿಗೆ ಸ್ಟೆಪ್ ಹಾಕಿದ್ದಾರೆ.
ಒಬ್ಬೊಬ್ಬ ನಟನ ಸ್ಟೆಪ್ 10 ಸೆಕೆಂಡ್‍ಗಳಲ್ಲಿ ಬಂದು ಹೋಗುತ್ತೆ. ಹಾಡಿಗೆ ತಕ್ಕಂತ ಕಾಸ್ಟ್ಯೂಮ್ ಕೂಡಾ ಮಾಡಿಕೊಂಡಿದ್ದಾರೆ ಶ್ರದ್ಧಾ ಮತ್ತು ಶಾನ್ವಿ. ಇವರ ಜೊತೆ ಕಾಮಿಡಿ ಕಲಾವಿದ ಪ್ರದೀಪ್ ಕೂಡಾ ಇದ್ದಾರೆ. ಇದೇ ದಿನ ವಿಡಿಯೋ ಬಿಡುಗಡೆಯಾಗುತ್ತಿದೆ.