` ಚಿತ್ರ ಸಾಹಿತಿಯಾದರು ನವರಸ ನಾಯಕ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
jaggesh writes new song
Jaggesh Image

ನಟ ಜಗ್ಗೇಶ್ ಪೋಷಕ, ಖಳ ಪಾತ್ರಗಳಿಂದ ನಾಯಕನ ಪಟ್ಟಕ್ಕೇರಿದವರು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಜಗ್ಗೇಶ್ ಎಂದರೆ ಅಷ್ಟೇ ಅಲ್ಲ, ಅವರಿಗೆ ಚಿತ್ರ ನಿರ್ಮಾಣದ ಪ್ರತಿ ವಿಭಾಗವೂ ಗೊತ್ತು. ಸಿನಿಮಾದ ಎಲ್ಲ ಹಂತಗಳಲ್ಲಿ ಕೆಲಸ ಮಾಡಿರುವ ಜಗ್ಗೇಶ್, ಆರಂಭದ ದಿನಗಳಲ್ಲಿ ಸಹ ನಿರ್ದೇಶಕರಾಗಿಯೂ ದುಡಿದಿದ್ದಾರೆ. ಚಿತ್ರ ನಿರ್ದೇಶನ, ನಿರ್ಮಾಣವನ್ನೂ ಮಾಡಿರುವ ಜಗ್ಗೇಶ್, ಈಗ ಚಿತ್ರ ಸಾಹಿತಿಯೂ ಆಗಿದ್ದಾರೆ.

ಕನ್ನಡದಲ್ಲಿ ನಾಯಕರು ಗಾಯಕರಾಗುವುದು ಅಪರೂಪವೇನೂ ಅಲ್ಲ. ಜಗ್ಗೇಶ್ ಕೂಡಾ ಗಾಯಕರೇ. ಆದರೆ, ಉಪೇಂದ್ರ ಬಿಟ್ಟರೆ, ಉಳಿದಂತೆ ನಾಯಕರು ಯಾರೂ ಹಾಡಿಗೆ ಸಾಹಿತ್ಯ ಬರೆದವರಲ್ಲ. ಉಪೇಂದ್ರ ಕೂಡಾ ನಿರ್ದೇಶಕರಾಗಿ ಮೊದಲು ಬಂದವರಾದ್ದರಿಂದ, ಜಗ್ಗೇಶ್ ವಿಭಿನ್ನವಾಗಿ ನಿಲ್ಲುತ್ತಾರೆ.

ಜಗ್ಗೇಶ್ ಹೊಸ ಚಿತ್ರ 8ಎಂಎಂ ಚಿತ್ರಕ್ಕೆ ಹಾಡು ಬರೆದಿದ್ದಾರೆ. ಇಷ್ಟು ದಿನ ಎಲ್ಲವನ್ನೂ ಪರರಿಗಾಗಿ ಮಾಡಿ ಎಲೆಮರೆ ಕಾಯಿಯಂತೆ ಬದುಕುತ್ತಿದ್ದೆ. ಇನ್ನು ಮುಂದೆ ನನ್ನ ಶ್ರಮ ನನ್ನ ಫಲವಾಗಲಿ.. ಅಲ್ಲವೇ ಎಂದಿದ್ದಾರೆ ಜಗ್ಗೇಶ್.

ಯುದ್ಧ ಭೂಮಿ..

ಕದನ ಮಾಡಿ ಗೆಲ್ಲು..

ಸೋಲು ಗೆಲುವು

ಸಾವು ನೋವು

ಲೆಕ್ಕ ಬಿಟ್ಟು ನಿಲ್ಲು.. ಎಂದು ಶುರುವಾಗುವ ಗೀತೆ, 8ಎಂಎಂ ಚಿತ್ರದ ಕ್ಲೈಮಾಕ್ಸ್‍ನಲ್ಲಿ ಬಳಕೆಯಾಗಲಿದೆ. ಚಿತ್ರಸಾಹಿತಿ ಜಗ್ಗೇಶ್‍ಗೆ ಶುಭವಾಗಲಿ.

#

Tagaru Movie Gallery

Prema Baraha Success Meet Gallery