ನಿಶ್ಚಿತಾರ್ಥದ ನಂತರ ಇರುವುದೆಲ್ಲವ ಬಿಟ್ಟು.. ಸಿನಿಮಾದಲ್ಲಿ ನಟಿಸುತ್ತಿರುವ ಮೇಘನಾ ರಾಜ್, ಈಗ ಇನ್ನೊಂದು ಸವಾಲಿಗೆ ಕೈ ಹಾಕಿದ್ದಾರೆ. ಮೇಘನಾ ರಾಜ್ ನಿರ್ಮಾಪಕಿಯಾಗುತ್ತಿದ್ದಾರಂತೆ. ತಮ್ಮದೇ ಹೊಸ ಬ್ಯಾನರ್ ಶುರು ಮಾಡಲಿದ್ದಾರಂತೆ. ಅಂದಹಾಗೆ ಮೇಘನಾ ಬ್ಯಾನರ್ನ ಮೊದಲ ಚಿತ್ರಕ್ಕೆ ನಾಯಕರಾಗಿ ಧ್ರುವ ಸರ್ಜಾ ನಟಿಸುವ ಸಾಧ್ಯತೆಗಳಿವೆ.
ಮೇಘನಾ ಕುಟುಂಬಕ್ಕೆ ಚಿತ್ರ ನಿರ್ಮಾಣದ ಅನುಭವ ಹೊಸದೇನಲ್ಲ. ಸುಂದರ್ ರಾಜ್, ಪ್ರಮೀಳಾ ಜೋಷಾಯ್ ನಿರ್ಮಾಪಕರಾಗಿದ್ದವರು. ಇನ್ನು ಸರ್ಜಾ ಫ್ಯಾಮಿಲಿಗೂ ಚಿತ್ರ ನಿರ್ಮಾಣ ಹೊಸದಲ್ಲ. ಆದರೆ, ಭಾವೀ ಪತಿಯ ತಮ್ಮನಿಗಾಗಿ ಮೇಘನಾ ನಿರ್ಮಾಪಕಿಯಾಗಲಿದ್ದಾರೆ ಎನ್ನುವುದೇ ಸುದ್ದಿ ಸ್ವಾರಸ್ಯ.