Print 
ravichandran, manoranjan

User Rating: 5 / 5

Star activeStar activeStar activeStar activeStar active
 
father and son unite on silver screen
Manoranjan, Ravichandran Image

ಕನ್ನಡದಲ್ಲಿ ತಂದೆ ಮಕ್ಕಳು ಬೆಳ್ಳಿ ತೆರೆಯಲ್ಲಿ ಒಟ್ಟಾಗಿ ಕಾಣಿಸಿಕೊಂಡಿರುವುದು ಹೊಸದೇನಲ್ಲ. ಡಾ.ರಾಜ್, ಶಿವರಾಜ್ ಕುಮಾರ್, ಪುನೀತ್ ರಾಜ್‍ಕುಮಾರ್ ಜೊತೆ, ದೇವರಾಜ್, ಪ್ರಜ್ವಲ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಈಗ ರವಿಚಂದ್ರನ್ ಮತ್ತು ಮನೋರಂಜನ್ ಸರದಿ.

ಅಪ್ಪ ಮಕ್ಕಳನ್ನು ಒಂದಾಗಿಸುತ್ತಿರುವುದು ಉರ್ವಿ ಖ್ಯಾತಿಯ ನಿರ್ದೇಶಕ ಪ್ರದೀಪ್ ವರ್ಮಾ. ಆರಂಭದಲ್ಲಿ ಮನೋರಂಜನ್ ಪ್ರದೀಪ್ ವರ್ಮಾ ಅವರ ತಲೆಯಲ್ಲಿರಲಿಲ್ಲ. ರವಿಚಂದ್ರನ್ ಅವರಿಗೆ ಕಥೆ ಹೇಳಿದ್ದ ವರ್ಮಾ, ಅವರನ್ನು ಒಪ್ಪಿಸಿದ್ದರು ಕೂಡಾ. ಅದಾದ ಮೇಲೆ ಆಕಸ್ಮಿಕವಾಗಿ ಸಿಕ್ಕ ಮನೋರಂಜನ್ ಅವರಿಗೆ ಕಥೆ ಹೇಳಿ, ಅವರು ಇಷ್ಟಪಟ್ಟಾಗ ನಿರ್ಧಾರ ಫೈನಲ್ ಆಯ್ತು ಎಂದಿದ್ದಾರೆ ಪ್ರದೀಪ್.

ಚಿತ್ರದಲ್ಲಿ ಮನೋರಂಜನ್ ಮತ್ತು ರವಿಚಂದ್ರನ್ ಅಪ್ಪ-ಮಗನಾಗಿಯೇ ಕಾಣಿಸಿಕೊಳ್ಳಲಿದ್ದಾರೆ. ತಂದೆ-ಮಗನ ಬಾಂಧವ್ಯದ ಸುತ್ತಲೇ ಚಿತ್ರದ ಕಥೆ ಹೆಣೆಯಲಾಗಿದೆ. ಚಿತ್ರದಲ್ಲಿ ಸಂಗೀತವೇ ಪ್ರಧಾನ ಎಂದಿದ್ದಾರೆ ಪ್ರದೀಪ್. ಡಿಸೆಂಬರ್‍ನಲ್ಲಿ ಚಿತ್ರ ಶುರುವಾಗಲಿದ್ದು, ಚಿತ್ರದ ಶೀರ್ಷಿಕೆ ಇನ್ನೂ ಅಂತಿಮವಾಗಿಲ್ಲ.