` ಮತ್ತೆ ಮತ್ತೆ ವಿಷ್ಣು..ಮತ್ತೊಮ್ಮೆ ನಿಶ್ಯಬ್ಧ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
nishabdha 2 again
Nishabdha 2

ನಿಶ್ಯಬ್ಧ. ನೆನಪಿದೆಯಾ..? ವಿಷ್ಣುವರ್ಧನ್-ದಿನೇಶ್ ಬಾಬು ಜೋಡಿಯ ವಿಭಿನ್ನ ಚಿತ್ರ. ನಾಯಿಗಳನ್ನೇ ಪ್ರಮುಖ ಪಾತ್ರಧಾರಿಗಳನ್ನಾಗಿ ಬಳಸಿಕೊಂಡು ವಿಭಿನ್ನವಾಗಿ ಕಥೆ ಹೇಳಿದ್ದರು ದಿನೇಶ್‍ಬಾಬು. ಈಗ ಮತ್ತೊಮ್ಮೆ ನಿಶ್ಯಬ್ಧ ನೆನಪಾಗುತ್ತಿದೆ. ನಿಶ್ಯಬ್ಧ 2 ಮೂಲಕ.

ಇದು ಹಾಲಿವುಡ್ ಬ್ಲಾಕ್‍ಬಸ್ಟರ್ `ಡೋಂಟ್ ಬ್ರೀಥ್' ಚಿತ್ರದ ಕನ್ನಡ ರೂಪ. ಹಿಂದಿಯಲ್ಲಿ ಅಜಯ್ ದೇವಗನ್ ಹಾಗೂ ತಮಿಳಿನಲ್ಲಿ ವಿಕ್ರಂ ಮಾಡ್ತಾರಂತೆ. ಕನ್ನಡದಲ್ಲಿ ನಿರ್ದೇಶಕ ದೇವರಾಜ್ ಕುಮಾರ್ ನಿಶ್ಯಬ್ಧವನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. 

ತಾರಾನಾಥ್ ಶೆಟ್ಟಿ ಬೋಲಾರ್ ಈ ಚಿತ್ರದ ನಿರ್ಮಾಪಕ. ಡೇಂಜರ್ ಜೋನ್ ಮೂಲಕ ಬೆಳ್ಳಿತೆರೆಗೆ ಪರಿಚಯವಾಗಿದ್ದ ರೂಪ್ ಶೆಟ್ಟಿ ನಾಯಕ. ನಟಾಶಾ ಎಂಬ ಮುಂಬೈ ಬೆಡಗಿ ಈ ಚಿತ್ರಕ್ಕೆ ನಾಯಕಿ. ವಿಶೇಷವೇನು ಗೊತ್ತಾ..? ಈ ಚಿತ್ರದಲ್ಲಿ ಅವಿನಾಶ್ ಇದೇ ಮೊದಲ ಬಾರಿಗೆ ಅಂಧನಾಗಿ ಕಾಣಿಸಿಕೊಂಡಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery