ಟೈಗರ್ ಗಲ್ಲಿ ಚಿತ್ರದಲ್ಲಿ 10 ನಿರ್ದೇಶಕರು ಒಟ್ಟಿಗೇ ಕೆಲಸ ಮಾಡಿದ್ದಾರೆ ಅನ್ನೋದನ್ನು ಓದಿದ್ದೀರಿ. ಇದು ಅಂಥದ್ದೇ ಇನ್ನೊಂದು ಸ್ವಾರಸ್ಯ. ಈ ಚಿತ್ರದಲ್ಲಿ ಮೂವರು ನಿರ್ಮಾಪಕರ ಮಕ್ಕಳು ಒಟ್ಟಿಗೇ ನಟಿಸಿದ್ದಾರೆ. ಚಿತ್ರದಲ್ಲಿ ನಟಿಸಿರುವ ಯೋಗೇಶ್ ಕುಮಾರ್, ಲಕ್ಷ್ಮೀಕಾಂತ್, ದೀಪು ಹಾಗೂ ದೀಪಕ್ ಕುಮಾರ್ ನಿರ್ಮಾಪಕರ ಮಕ್ಕಳು.
ನಿಮಾಪಕರಾದ ಎಂ.ಎನ್.ಕುಮಾರ್, ಆರ್.ಎಸ್.ಗೌಡ, ಜಿ.ಜಿ. ಕೃಷ್ಣ ಹಾಘೂ ಶೋಭಾ ರಾಜಣ್ಣ ಅವರ ಮಕ್ಕಳು. ಇವರೆಲ್ಲರೂ ಚಿತ್ರದಲ್ಲಿ ನಟಿಸಿದ್ದರೂ, ವಿಲನ್ ಪಾತ್ರಗಳಲ್ಲೇ ಇದ್ಧಾರೆ. ನಿರ್ಮಾಪಕರ ಮಕ್ಕಳು ಎಂಬ ಕಾರಣಕ್ಕೆ ಯಾವುದೇ ಬಿಲ್ಡಪ್ ಇಲ್ಲ ಎನ್ನುವುದು ವಿಶೇಷ.
ಇಡೀ ತಂಡ ಸುನಾಮಿಯಂತೆ. ಆರಂಭದಿಂದ ಅಂತ್ಯದವರೆಗೆ ಬೆಂಕಿ ಉಗುಳುತ್ತಲೇ ಇರುತ್ತೆ. ಒಂದೇ ಒಂದು ಕ್ಷಣವೂ ವಿರಮಿಸುವುದಿಲ್ಲ. ಚಿತ್ರ ನೋಡನೋಡುತ್ತಲೇ ಒಂದು ವಿಚಿತ್ರ ತಲ್ಲಣ, ತಳಮಳ ಸೃಷ್ಟಿಸುತ್ತಲೇ ಇರುತ್ತೆ. ಚಿತ್ರದ ಪ್ರತಿ ಪಾತ್ರವೂ ಬೆಂಕಿ ಉಗುಳುತ್ತೆ ಎಂದಿದ್ದಾರೆ ನಿರ್ದೇಶಕ ರವಿ ಶ್ರೀವತ್ಸ.