` ಖಳನಟ ಸತ್ಯಜಿತ್‍ಗೆ ಬಾಗಲಕೋಟೆಯಲ್ಲಿ ಹೊಸ ಜೀವನ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
satyajith
Satyajith Image

ಕನ್ನಡದ ಖ್ಯಾತ ಖಳನಟ ಸತ್ಯಜಿತ್ ಅವರಿಗೆ ಬಾಗಲಕೋಟೆಯಲ್ಲಿ ಕೃತಕ ಕಾಲು ಜೋಡಣೆ ಮಾಡಲಾಗಿದೆ. ಗ್ಯಾಂಗ್ರಿನ್‍ನಿಂದ ಒಂದು ಕಾಲು ಕಳೆದುಕೊಂಡಿದ್ದ ಸತ್ಯಜಿತ್, ಸುಮಾರು ಒಂದು ವರ್ಷದಿಂದ ಹಾಸಿಗೆ ಹಿಡಿದಿದ್ದಾರೆ. ಇದೇ ಕೃತಕ ಕಾಲು ಜೋಡಣೆಗೆ ಬೆಂಗಳೂರಿನ ವೈದ್ಯರು 4 ಲಕ್ಷದ 80 ಸಾವಿರ ಕೇಳಿದ್ದರಂತೆ. ಅದೇ ಕೆಲಸ ಬಾಗಲಕೋಟೆಯಲ್ಲಿ ಕೇವಲ 2 ಲಕ್ಷ 80 ಸಾವಿರದಲ್ಲಿ ಆಗಿದೆ. ಎರಡು ಲಕ್ಷ ವ್ಯತ್ಯಾಸ. ಸಣ್ಣದೇನಲ್ಲ. ಬೆಂಗಳೂರಿನಲ್ಲಿ ಎಲ್ಲ ಸೌಕರ್ಯಗಳೂ ಸಿಗುತ್ತವೆ ಎಂಬುದಕ್ಕೆ ವಿರುದ್ಧವಾಗಿ, ಕಡಿಮೆ ವೆಚ್ಚದಲ್ಲಿ ಸತ್ಯಜಿತ್ ಕೃತಕ ಕಾಲು ಜೋಡಿಸಿಕೊಂಡಿದ್ದಾರೆ.

ಆದರೆ, ಸತ್ಯಜಿತ್‍ಗೆ ಕಲಾವಿದರ ಸಂಘದ ಬಗ್ಗೆ ಅಸಮಾಧಾನವಿದೆ. ಸಂಘದ ಯಾರೊಬ್ಬರೂ ನನಗೆ ಪರಿಹಾರ ನೀಡಿಲ್ಲ. ಆಯ್ದುಕೊಂಡು ತಿನ್ನು ಕೋಳಿಯ ಕಾಲು ಮುರಿದಂತಾಗಿದೆ ನನ್ನ ಪರಿಸ್ಥಿತಿ ಎಂದು ಸತ್ಯಜಿತ್ ಅಳಲು ತೋಡಿಕೊಂಡಿದ್ದಾರೆ. ಅಂಬರೀಷ್ ಒಂದು ಫೋನ್ ಕೂಡಾ ಮಾಡಿಲ್ಲ. ಹೇಗಿದ್ದೀಯ ಎಂದು ಕೇಳಿಲ್ಲ ಎನ್ನುವುದು ಸತ್ಯಜಿತ್ ಬೇಸರ. 

ಕಲಾವಿದರ ಸಂಘ ಸತ್ಯಜಿತ್‍ಗೆ ನೆರವಿಗೆ ಹೋಗಿದೆಯೋ..ಇಲ್ಲವೋ.. ಕೆಲವು ಕಲಾವಿದರು ಸತ್ಯಜಿತ್‍ಗೆ ನೆರವು ನೀಡಿರುವುದಂತೂ ಹೌದು. ಸತ್ಯಜಿತ್‍ಗೆ ಹೀಗಾಗಿದೆ ಎಂದು ಗೊತ್ತಾದಾಗ ಹಿರಿಯ ನಟ ಶಿವರಾಜ್ ಕುಮಾರ್, ಪುನೀತ್ ರಾಜ್‍ಕುಮಾರ್, ಉಪೇಂದ್ರ ತಲಾ ಒಂದು ಲಕ್ಷ ಕೊಟ್ಟಿದ್ದರು ಎಂದು ಖುದ್ದು ಸತ್ಯಜಿತ್ ಅವರೇ ಹೇಳಿಕೊಂಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಸತ್ಯಜಿತ್‍ಗೆ ಸ್ಪಂದಿಸಿದ್ದರು. ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು ಅವರು ಕೂಡಾ ಸತ್ಯಜಿತ್‍ಗೆ ನೆರವು ನೀಡಿದ್ದರು. ಅವರು ಬೇಗ ಗುಣಮುಖರಾಗಲಿ ಎನ್ನುವುದು ಎಲ್ಲರ ಹಾರೈಕೆ.

Related Articles :-

Stars Rush To Help Satyajith

Sudeep Fans Association Help Satyajith - Exclusive

Want to Help Satyajith? - Here Is his Bank Details

Satyajith Left Leg Amputated - Watch Video - Exclusive

 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery