Print 
TN seetharam vidhana souda,

User Rating: 0 / 5

Star inactiveStar inactiveStar inactiveStar inactiveStar inactive
 
seetharam is desperate
TN Seetharam, Vidhanan Soudha Image

ಟಿ.ಎನ್. ಸೀತಾರಾಮ್. ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ. ಹಿಟ್ ಮತ್ತು ಫ್ಲಾಪ್ ಚಿತ್ರಗಳೆರಡನ್ನೂ ಕೊಟ್ಟಿದ್ದಾರೆ. ಸೀರಿಯಲ್ ಲೋಕದಲ್ಲಂತೂ ಮೈದಾಸ. ಸೋತಿದ್ದೇ ಇಲ್ಲ. ರಂಗಭೂಮಿಯಲ್ಲೂ ಯಶಸ್ವಿ ಇತಿಹಾಸ ಹೊಂದಿರುವ ಸೀತಾರಾಮ್, ತಮ್ಮ ಇಷ್ಟು ವರ್ಷಗಳ ವೃತ್ತಿ ಬದುಕಿನಲ್ಲಿ ಇಂಥಾ ಟೀಕೆಗಳನ್ನು ಯಾವತ್ತೂ ಎದುರಿಸಿಲ್ಲವೇನೋ.. ಅಂದಹಾಗೆ ಇವತ್ತು ವಿಧಾನಸೌಧದ ವಜ್ರಮಹೋತ್ಸವ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಸೀತಾರಾಮ್ ಅವರ ಸಾಕ್ಷ್ಯಚಿತ್ರಗಳು ಇಷ್ಟು ಹೊತ್ತಿಗೆ ಮುಕ್ತಾಯ ಹಂತದಲ್ಲಿರುತ್ತಿದ್ದವು. ಆದರೆ, ಸಾಕ್ಷ್ಯಚಿತ್ರ ನಿರ್ಮಾಣಕ್ಕೆ 1.58 ಕೋಟಿ ಪಡೆಯುತ್ತಿದ್ದಾರೆ ಎನ್ನುವುದು ಟೀಕಾಕಾರರಿಗೆ ಸರಕಾಯಿತು. ಸಾಕ್ಷ್ಯಚಿತ್ರದ ಸಹವಾಸವೇ ಸಾಕು ಎಂದು ಹೊರಬಂದ ಸೀತಾರಾಮ್, ತಮ್ಮ ವಿರುದ್ಧದ ಆರೋಪಗಳೆಲ್ಲದಕ್ಕೂ ಉತ್ತರ ಕೊಟ್ಟಿದ್ದಾರೆ. 

ಟೀಕಾಕಾರರು ಹೇಳುತ್ತಿರುವಂತೆ 1.58 ಕೋಟಿಯಲ್ಲಿ ನಿರ್ಮಾಣವಾಗುತ್ತಿದ್ದುದು ಒಂದು ಸಾಕ್ಷ್ಯಚಿತ್ರವಲ್ಲ. 7 ಸಾಕ್ಷ್ಯಚಿತ್ರಗಳು. ಒಟ್ಟು 240 ನಿಮಿಷಗಳ ಸಾಕ್ಷ್ಯಚಿತ್ರ ಸಿದ್ಧ ಮಾಡಬೇಕಿತ್ತು. 136 ವರ್ಷಗಳ ಇತಿಹಾಸ ಹೇಳುವ ಸವಾಲು ನಮ್ಮ ಮುಂದಿತ್ತು.

ಡಾಕ್ಯುಮೆಂಟರಿಯನ್ನು ಫೋಟೋ ಮತ್ತು ಹಿನ್ನೆಲೆ ಧ್ವನಿಯಲ್ಲಿ ಹೇಳುವ ಕಾನ್ಸೆಪ್ಟ್ ಕೈಬಿಟ್ಟು, ಮರುಸೃಷ್ಟಿ ಮಾಡುವ ಸಾಹಸಕ್ಕೆ ಕೈ ಹಾಕಿದ್ದೆವು. 

ಡಾಕ್ಯುಮೆಂಟರಿ ಮಾಡುವುದು ಸುಲಭವಲ್ಲ. ಅದಕ್ಕಾಗಿ 7 ಲಕ್ಷ ಪುಟಗಳ ದಾಖಲೆಗಳನ್ನು ಓದಬೇಕಿತ್ತು. ನೂರಾರು ಶಾಸಕರು, ಸಂಸದರನ್ನು ಮಾತನಾಡಿಸಬೇಕಿತ್ತು. ಅದು ಸುಲಭದ ಕೆಲಸವೇನೂ ಆಗಿರಲಿಲ್ಲ. ಇದಕ್ಕಾಗಿ 8 ಜನರ ತಂಡ 5 ತಿಂಗಳಿಂದ ಕೆಲಸ ಮಾಡುತ್ತಿತ್ತು.

ರಾಜ್ಯಸಭೆಗೆ ಶ್ಯಾಮ್‍ಬೆನಗಲ್ ನಿರ್ದೇಶಿಸಿದ್ದ ಸಂವಿಧಾನ್ ಸಾಕ್ಷ್ಯಚಿತ್ರದ ಮಾದರಿಯಲ್ಲಿ ಡಾಕ್ಯುಮೆಂಟರಿ ಮಾಡುವ ಯೋಜನೆ ರೂಪಿಸಿದ್ದೆವು. ಈಗಾಗಲೇ 2 ಸಾಕ್ಷ್ಯಚಿತ್ರಗಳು ಪೂರ್ಣಗೊಂಡಿದ್ದವು.

ಈ ಸಾಕ್ಷ್ಯಚಿತ್ರಗಳಿಗಾಗಿ ನಾನು ನನ್ನ ನಿರ್ದೇಶನದ ಚಿತ್ರದ ಪ್ರಚಾರದಿಂದ ದೂರ ಉಳಿಯಬೇಕಾಯ್ತು. ಡ್ರಾಮಾ ಜ್ಯೂನಿಯರ್ಸ್ ಜಡ್ಜ್ ಸ್ಥಾನದಿಂದ ಹಿಂದೆ ಸರಿಯಬೇಕಾಯ್ತು. 

ಹೀಗೆ ಕಾರಣಗಳನ್ನು ಹೇಳುತ್ತಾ ಹೋಗಿರುವ ಸೀತಾರಾಮ್, ನನಗೆ ಸಾಕ್ಷ್ಯಚಿತ್ರಗಳ ಸಹವಾಸವೇ ಬೇಡ ಎಂಬ ಸ್ಥಿತಿಗೆ ಬಂದುಬಿಟ್ಟಿದ್ದಾರೆ. ಸಿದ್ಧವಾರಿರುವ ಎರಡು ಸಾಕ್ಷ್ಯಚಿತ್ರಗಳು ಹಾಗೂ ಶೂಟ್ ಮಾಡಿರುವ ಫುಟೇಜ್‍ಗಳನ್ನು ಸರ್ಕಾರಕ್ಕೆ ನೀಡಿ ಕೈಮುಗಿಯಲು ನಿರ್ಧರಿಸಿದ್ದಾರೆ. ಸಾರ್ವಜನಿಕರ ಹಣದ ವಿಚಾರದಲ್ಲಿ ಅನುಮಾನಗಳೆದ್ದಾಗ ಮುಂದುವರೆಯುವುದು ಸರಿಯಲ್ಲ. ನೋವಾಗಿದೆ ನಿಜ. ಆದರೆ, ಹಿಂದೆ ಸರಿಯುವ ನನ್ನ ನಿರ್ಧಾರವೂ ಸರಿಯಾಗಿದೆ ಎನ್ನುತ್ತಾರೆ ಸೀತಾರಾಮ್.

ಅಂದಹಾಗೆ ಒಂದು ಇತಿಹಾಸ ನಿಮ್ಮ ನೆನಪಿನಲ್ಲಿರಲಿ. ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ ಕೂಡಾ ಅದೇ ವಿಧಾನಸೌಧ ಕಟ್ಟಡ ನಿರ್ಮಾಣ ವಿಚಾರದಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸಿದ್ದವರು. ವಿಧಾನಸೌಧದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಎಂಜಿನಿಯರ್‍ನನ್ನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಹಾಲಿನ ಮೇಲೆ ಪ್ರಮಾಣ ಮಾಡಿಸಿದ್ದ ಹನುಮಂತಯ್ಯನವರನ್ನೂ ಈ ಭ್ರಷ್ಟಾಚಾರದ ಆರೋಪ ಬಿಟ್ಟಿರಲಿಲ್ಲ. ಸೀತಾರಾಮ್ ಕೂಡಾ ಹಾಗೆಯೇ ಆರೋಪ ಎದುರಿಸಿದ್ದಾರೆ ಅಷ್ಟೆ.