ಕಿಚ್ಚ ಸುದೀಪ್ ಹಾಲಿವುಡ್ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ ನೆನಪಿದೆ ತಾನೆ. ರೈಸನ್ ಅನ್ನೋ ಚಿತ್ರದ ಶೂಟಿಂಗ್ ಶುರುವಾಗಿದ್ದು, ನಾಯಕಿಯ ಆಯ್ಕೆಯೂ ಆಗಿದೆ. ಕೆಲವು ಭಾಗಗಳ ಶೂಟಿಂಗ್ ಕೂಡಾ ಮುಗಿದಿದೆ. ಆದರೆ, ಚಿತ್ರದ ನಿರ್ದೇಶಕ ಎಡ್ಡಿ ಆರ್ಯ ಹಾಗೂ ಸುದೀಪ್ ಭೇಟಿ ಸಾಧ್ಯವಾಗಿರಲಿಲ್ಲ. ಈಗ ಸುದೀಪ್ ಮನೆಗೇ ಬಂದಿರುವ ಆರ್ಯ, ಸುದೀಪ್ಗೆ ಚಿತ್ರದ ಕಥೆ ಹಾಗೂ ಚಿತ್ರಕಥೆಯ ವಿವರ ನೀಡಿದ್ದಾರೆ.
ಸುದೀಪ್ ಮನೆಯಲ್ಲಿಯೇ ಔತಣ ಸ್ವೀಕರಿಸಿರುವ ಆರ್ಯ, ಚಿತ್ರದ ಫೋಟೋಶೂಟ್ನ್ನು ಬೆಂಗಳೂರಿನಲ್ಲಿಯೇ ನಡೆಸಲಿದ್ದಾರಂತೆ. ರೈಸನ್ ಚಿತ್ರದಲ್ಲಿ ಸುದೀಪ್ ಕಮಾಂಡೋ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆಯಾದರೂ ಗುಟ್ಟು ಬಿಟ್ಟುಕೊಟ್ಟಿಲ್ಲ.