ರಾಜು ಕನ್ನಡ ಮೀಡಿಯಂ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಗೊತ್ತಿರುವ ವಿಚಾರ. ಆದರೆ, ಆ ಟ್ರೇಲರ್‍ನ ಪುಟ್ಟ ವಿಡಿಯೋವನ್ನು ಎಡಿಟ್ ಮಾಡಿರುವ ಅಭಿಮಾನಿಗಳು, ಅದನ್ನು ತಮ್ಮ ತಮ್ಮ ಪೇಜ್‍ಗಳಲ್ಲಿ ಹಾಕಿಕೊಂಡು ಷೇರ್ ಮಾಡುತ್ತಿದ್ದಾರೆ. ಇಷ್ಟಕ್ಕೂ ಆ ವಿಡಿಯೋವನ್ನು ಕನ್ನಡಿಗರು ಮೆಚ್ಚಿದ್ದೇಕೆ..? ಅದರಲ್ಲಿ ಅಂಥದ್ದೇನಿದೆ ಅನ್ನೋ ಕುತೂಹಲ ಇದೆಯಾ..?
ಆ ವಿಡಿಯೋದಲ್ಲಿರೋದು ಇಷ್ಟೆ. ಕನ್ನಡ ರಾಜು ಫಾರಿನ್‍ಗೆ ಹೋಗಿರ್ತಾನೆ. ಆತನನ್ನು ವಿದೇಶಿ ಸುಂದರಿಯೊಬ್ಬಳು ಮಾತನಾಡಿಸಿ ನೀನು ಮಾತನಾಡುತ್ತಿರುವುದು ಯಾವ ಭಾಷೆ. ಕೇಳೋಕೆ ಚೆನ್ನಾಗಿದೆ ಅಂತಾಳೆ.
ರಾಜು, ಕನ್ನಡ.. ಕಸ್ತೂರಿ ಕನ್ನಡ ಅಂಥಾನೆ. ಆ ಫಾರಿನ್ ಹುಡುಗಿ, ನಾನೂ ಕನ್ನಡ ಕಲಿಯುತ್ತೇನೆ.. ನನಗೂ ಕನ್ನಡ ಕಲಿಸಿ ಎಂದಾಗ ರಾಜು ಹೇಳುವುದು ಇಷ್ಟು. ನಿಮಗೆ ಇರುವ ಈ ಕಳಕಳಿ, ನಮ್ಮ ಪಕ್ಕದ ರಾಜ್ಯದಿಂದ ಬಂದಿರುವವರಿಗೆ ಇದ್ದು ಕನ್ನಡ ಕಲಿತಿದ್ದರೆ, ಕನ್ನಡ ನವೆಂಬರ್ ಕನ್ನಡ ಅಲ್ಲ, ನಂಬರ್ 1 ಕನ್ನಡ ಆಗುತ್ತಿತ್ತು ಅಂತಾನೆ.
ನವೆಂಬರ್ ರಾಜ್ಯೋತ್ಸವ ಬೇರೆ ಹತ್ತಿರ ಬರುತ್ತಿರುವಾಗ, ರಾಜು ಕನ್ನಡ ಮೀಡಿಯಂನ ಈ ಡೈಲಾಗ್ ಇಷ್ಟವಾಗಿರೋದೇ ಈ ಕಾರಣಕ್ಕೆ.