ಬಕಾಸುರ. ರವಿಚಂದ್ರನ್ ನಟಿಸುತ್ತಿರುವ ಈ ಚಿತ್ರದಲ್ಲಿ 50ಕ್ಕೂ ಹೆಚ್ಚು ಸ್ಟಾರ್‍ಗಳು ನಟಿಸುತ್ತಿದ್ದಾರೆ. ಶಿವರಾಜ್ ಕುಮಾರ್, ಪುನೀತ್ ರಾಜ್‍ಕುಮಾರ್, ಗಣೇಶ್, ಪರೂಲ್ ಯಾದವ್, ನೀನಾಸಂ ಸತೀಶ್, ಮೇಘನಾ ಗಾಂವ್ಕರ್, ಮೇಘನಾ ರಾಜ್, ಶಾನ್ವಿ, ನಭಾ ನಟೇಶ್, ವಿಜಯ್ ರಾಘವೇಂದ್ರ, ಪ್ರಜ್ವಲ್ ದೇವರಾಜ್, ರಶ್ಮಿಕಾ ಮಂದಣ್ಣ, ಶ್ರದ್ಧಾ ಶ್ರೀನಾಥ್, ಶ್ರೀಮುರಳಿ.. ನಿರ್ದೇಶಕರಾದ ಸಿಂಪಲ್ ಸುನಿ, ಪವನ್ ಒಡೆಯರ್, ಅನೂಪ್ ಭಂಡಾರಿ.. ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯಾ, ಗುರುಕಿರಣ್, ರಘು ದೀಕ್ಷಿತ್.. ಹೀಗೆ ಪಟ್ಟಿ ದೊಡ್ಡದಿದೆ. ಅಧಿಕೃತ ಪಟ್ಟಿ ಪ್ರಕಾರವೇ ಒಂದು ಹಾಡಿನಲ್ಲಿ ಕಾಣಿಸಿಕೊಂಡಿರುವ ಚಿತ್ರೋದ್ಯಮದ ಸೆಲಬ್ರಿಟಿಗಳ ಸಂಖ್ಯೆ 56 ದಾಟಿದೆ.
ಕನ್ನಡದಲ್ಲಿ ಕಲಾವಿದರು, ತಂತ್ರಜ್ಞರು ತೆರೆಯ ಮೇಲೆ ಕಾಣಿಸಿಕೊಳ್ಳೋದು ಹೊಸದೇನೂ ಅಲ್ಲ. ಆದರೆ, ಇಷ್ಟು ದೊಡ್ಡ ಮಟ್ಟದಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲು. ಅಫ್‍ಕೋರ್ಸ್.. ರವಿಚಂದ್ರನ್ ಎಂಬ ಹೆಸರು ಇಷ್ಟೂ ಕಲಾವಿದರು, ತಂತ್ರಜ್ಞರನ್ನು ಒಟ್ಟುಗೂಡಿಸುವಂತೆ ಮಾಡಿದೆ ಎನ್ನುವುದರಲ್ಲಿ ಅನುಮಾನವೇನೂ ಇಲ್ಲ.