` ವಿಭಿನ್ನ ಪ್ರಯತ್ನವನ್ನು ವಿಶೇಷವಾಗಿ ಗಮನಿಸಿದ ಪ್ರೇಕ್ಷಕ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
dayavittu gamanisi attracts audience
Dayavittu Gamanisi Movie Image

ದಯವಿಟ್ಟು ಗಮನಿಸಿ. ಚಿತ್ರ ಟೈಟಲ್‍ನಿಂದಲೇ ಗಮನ ಸೆಳೆದಿತ್ತು. ಹಾಡುಗಳು, ಟ್ರೇಲರ್‍ಗಳು ವಿಚಿತ್ರ ಕುತೂಹಲ ಮೂಡಿಸಿದ್ದವು. ಈಗ ಚಿತ್ರ ಬಿಡುಗಡೆಯಾದ ಮೇಲೆ 4 ಕಥೆಗಳನ್ನು ಒಂದೇ ಸಿನಿಮಾದಲ್ಲಿ ಹೇಳಿದ್ದಾರೆ ಎಂಬ ಅಂಶವೇ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ತಿಥಿ, ರಾಮಾ ರಾಮೇ ರೇ, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕರ್ವ ಮೊದಲಾದ ಚಿತ್ರಗಳು ಗೆದ್ದಂತೆ...ದಯವಿಟ್ಟು ಗಮನಿಸಿ ಕೂಡಾ ಗೆಲುವಿನ ಹಾದಿಯಲ್ಲಿದೆ. ಒಂದು ವರ್ಗದ ಪ್ರೇಕ್ಷಕರು ದಯವಿಟ್ಟು ಗಮನಿಸಿಯನ್ನು ನೋಡಿ, ಮೆಚ್ಚುಗೆ ವ್ಯಕ್ತಪಡಿಸಿ, ಸ್ವತಃ ಪ್ರಚಾರ ಮಾಡುತ್ತಿರುವುದು ಚಿತ್ರಕ್ಕೆ ಸಿಕ್ಕಿರುವ ಅಭೂತಪೂರ್ವ ಗೆಲುವು.

ನಿರ್ದೇಶಕ ರೋಹಿತ್ ಪದಕಿಯವರ ಶ್ರಮ ಮತ್ತು ಪ್ರತಿಭೆಯನ್ನು ಪ್ರೇಕ್ಷಕರು ಗುರುತಿಸಿದ್ದಾರೆ. ಚಿತ್ರ ತಂಡಕ್ಕೆ ಅದೇ ಒಂದು ದೊಡ್ಡ ಹೆಮ್ಮೆಯಾಗಿದೆ. ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಅವರ ಸಂಗೀತವಂತೂ ಚಿತ್ರದ ನಿಜವಾದ ಹೀರೋ ಎಂಬಷ್ಟರಮಟ್ಟಿಗೆ ಪ್ರೇಕ್ಷಕರಿಗೆ ಇಷ್ಟವಾಗಿದೆ.

ಕನ್ನಡದಲ್ಲಿ ವಿಭಿನ್ನ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಅಂತಹ ವಿಶಿಷ್ಟ ಪ್ರಯೋಗಾತ್ಮಕ ಚಿತ್ರಗಳಿಗೆ ಕಾಯುತ್ತಿರುವ ಪ್ರೇಕ್ಷಕರು ಅಂತಹ ಚಿತ್ರಗಳನ್ನು ಗೆಲ್ಲಿಸಿಯೇ ಗೆಲ್ಲಿಸುತ್ತಾರೆ ಎಂಬುದಕ್ಕೆ ದಯವಿಟ್ಟು ಗಮನಿಸಿ ಗೆಲುವೇ ಸಾಕ್ಷಿ.

Rambo 2 Movie Gallery

https://www.chitraloka.com/news/17774-heart-touching-song-on-mother-s-by-amma-i-love-you.html

Amma I Love You Movie Gallery