` ಉಪ್ಪು ಹುಳಿ ಖಾರ.. ಸುದೀಪ್, ಪುನೀತ್, ಸಾಧು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
uppu huli khara gets star voice
Uppu Huli Khara Movie Image

ಉಪ್ಪು ಹುಳಿ ಖಾರ. ಇದು ಇಮ್ರಾನ್ ಸರ್ದಾರಿಯಾ ನಿರ್ದೇಶನದ ಚಿತ್ರ. ಶೂಟಿಂಗ್ ಮುಗಿದು ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದ ಸ್ಪೆಷಲ್ ಏನೆಂದರೆ, ಈ ಚಿತ್ರದಲ್ಲಿ ಸುದೀಪ್, ಪುನೀತ್ ಹಾಗೂ ಸಾಧು ಇದ್ದಾರೆ. ನಾಯಕರಾಗಿ ಅಲ್ಲ.. ಗಾಯಕರಾಗಿ.

ಗಣೇಶನ ಮೇಲೆ ರಚಿಸಲಾಗಿರುವ ಹಾಡನ್ನು ಹಾಡಿರೋದು ಸುದೀಪ್. ಇನ್ನೊಂದು ಹಾಡನ್ನು ಪುನೀತ್ ಹಾಡಿದ್ದರೆ, ಮತ್ತೊಂದು ಹಾಡನ್ನ8ಉ ಸಾಧು ಕೋಕಿಲ ಹಾಡಿದ್ದಾರೆ. ಚಿತ್ರಕ್ಕೆ ಸಂಗೀತ ನೀಡಿರುವುದು ಗಾಯಕ ಶಶಾಂಕ್ ಶೇಷಗಿರಿ. ಅವರ ಜೊತೆ ಜ್ಯೂಡಾ ಸ್ಯಾಂಡಿ, ಪ್ರಜ್ವಲ್ ಪೈ ಹಾಗೂ ಕಿಶೋರ್ ಎಕ್ಸಾ ಎಂಬುವರು ಹಾಡು ಸಂಯೋಜಸಿದ್ದಾರೆ. ಅಲ್ಲಿಗೆ ಒಂದೇ ಚಿತ್ರದಲ್ಲಿ ನಾಲ್ವರು ಸಂಗೀತ ನಿರ್ದೇಶಕರು ಕೆಲಸ ಮಾಡಿದ ದಾಖಲೆಯನ್ನೂ ಚಿತ್ರ ಬರೆದಿದೆ.

Geetha Movie Gallery

Ombattane Dikku Launch Meet Gallery