` ಟೆರರಿಸಂ ಸಿನಿಮಾಗೆ ರಾಗಿಣಿ ನಾಯಕಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ragini will be terror girl
Ragini Image

ಹುಡುಗಾಟದ ಹುಡುಗಿ, ಗ್ಲ್ಯಾಮರ್ ಗೊಂಬೆ, ಇನ್ಸ್‍ಪೆಕ್ಟರ್, ಸಿಎಂ ಹೀಗೆ ಹಲವು ಅವತಾರಗಳಲ್ಲಿ ಕಾಣಿಸಿಕೊಂಡಿರುವ ರಾಗಿಣಿ, ಈಗ ಭಯೋತ್ಪಾದನೆ ಕುರಿತ ಚಿತ್ರವೊಂದರಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಭಯೋತ್ಪಾದನೆ ಕುರಿತ ಚಿತ್ರ ನಿರ್ದೇಶಿಸುತ್ತಿರುವುದು ಪಿ.ಸಿ. ಶೇಖರ್.

ಕೆಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟದ ಘಟನೆ ಇಟ್ಟುಕೊಂಡು ಕಥೆ ಹೆಣೆದಿದ್ದಾರಂತೆ ಪಿ.ಸಿ. ಶೇಖರ್. ಒಬ್ಬ ಯುವತಿಯ ಜೀವನದಲ್ಲಿ ಭಯೋತ್ಪಾದನೆಯ ಕರಿನೆರಳು ಏನೇನೆಲ್ಲ ಪರಿಣಾಮ ಬೀರುತ್ತದೆ ಎನ್ನುವ ಒನ್‍ಲೈನ್ ಕಥೆಯಿಟ್ಟುಕೊಂಡು ಚಿತ್ರಕಥೆ ಹೆಣೆದಿದ್ದಾರಂತೆ ಶೇಖರ್.

ಸೆಟ್, ಟ್ರ್ಯಾಲಿ ಇಲ್ಲದೆ ಲೈವ್ ಲೊಕೇಷನ್‍ಗಳಲ್ಲಿ ಶೂಟ್ ಮಾಡಲು ಪ್ಲಾನ್ ರೂಪಿಸಲಾಗಿದೆ. ಸದ್ಯಕ್ಕೆ ರಾಗಿಣಿ ಒಬ್ಬರೇ ಆಯ್ಕೆಯಾಗಿದ್ದು, ಉಳಿದ ತಾರಾಗಣದ ಆಯ್ಕೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಹಾಂಕಾಂಗ್‍ನಲ್ಲಿರುವ ಭಾರತೀಯ ಮೂಲದ ಉದ್ಯಮಿ ಅಲಂಕಾರ್ ಎಂಬುವವರು ಚಿತ್ರದ ನಿರ್ಮಾಪಕರಾಗಿದ್ದಾರೆ.

ಇದೊಂದು ಥ್ರಿಲ್ಲರ್ ಕಥೆಯಾಗಿದ್ದು, ಸಿನಿಮಾ ನೋಡುವವರೂ ಅಷ್ಟೇ ಥ್ರಿಲ್ ಅನುಭವಿಸುತ್ತಾರೆ. ಈ ರೀತಿಯ ಪಾತ್ರವನ್ನು ಯಾರೂ ಪ್ರಯತ್ನಿಸಿಲ್ಲ ಎಂದು ಹೇಳಿಕೊಂಡಿದ್ದಾರೆ ರಾಗಿಣಿ.

 

Rambo 2 Movie Gallery

https://www.chitraloka.com/news/17774-heart-touching-song-on-mother-s-by-amma-i-love-you.html

Amma I Love You Movie Gallery