` ರಾಜಕುಮಾರನ ಟಿವಿಗೇ ಪೂಜೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
raajakumara movie craze
Raajakumara Fans Craze

ಅಭಿಮಾನಿಗಳು, ತಮ್ಮ ತಮ್ಮ ನೆಚ್ಚಿನ ಸ್ಟಾರ್ ಚಿತ್ರ ರಿಲೀಸ್ ಆದರೆ, ಪೂಜೆ ಮಾಡಿ, ಕಟೌಟ್ ಹಾಕಿ, ಪಟಾಕಿ ಹೊಡೆದು, ಕ್ಷೀರಾಭಿಷೇಕ ಮಾಡಿ, ಕುಣಿಯುವುದು ಹೊಸದೇನೂ ಅಲ್ಲ. ಆದರೆ, ಈ ಬಾರಿ ಅಭಿಮಾನಿಗಳು ಇನ್ನೂ ಹೆಜ್ಜೆ ಮುಂದೆ ಹೋಗಿದ್ದಾರೆ. ರಾಜಕುಮಾರ ಚಿತ್ರ ಪ್ರದರ್ಶನ ವೇಳೆ ಟಿವಿಗೇ ಪೂಜೆ ಮಾಡಿದ್ದಾರೆ.

ರಾಜಕುಮಾರ ಸಿನಿಮಾ, ಟಿವಿಯಲ್ಲಿ ಪ್ರಸಾರವಾಗುವಾಗ ಟಿವಿಗೆ ಪೂಜೆ ಮಾಡಿರುವ ಫೋಟೋಗಳನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡು ಸಂಭ್ರಮಿಸಿದ್ದಾರೆ. ಪುನೀತ್ ರಾಜ್‍ಕುಮಾರ್, ನಮ್ಮ ರಾಜಕುಮಾರ ಎಂದು ಸಾಬೀತು ಪಡಿಸಿದ್ದಾರೆ.