` ಸ್ಟಾರ್ ಆಗ್ಬುಟ್ರು ನಿವೇಡಿಟಾ ಗೌಡ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
big boss 5 contestant Gowda
Niveditha Gowda Image

ನೀವು ಓದ್ತಾ ಇರೋದು ಸರಿಯಾಗೇ ಇದೆ. ಅದು ನಿವೇದಿತಾ ಗೌಡ ಅಲ್ಲ. ನಿವೇಡಿಟಾ ಗೌಡ. ಅದು ಫೇಮಸ್ ಆಗಿದ್ದು ಆಕೆಯ ಕಂಗ್ಲಿಷ್‍ನಿಂದ. ಬಿಗ್‍ಬಾಸ್ ಮನೆ ಸೇರಿದವರಲ್ಲಿ ಸಿಕ್ಕಾಪಟ್ಟೆ ಫೇಮಸ್ ಆದ ಹುಡುಗಿ ಈ ನಿವೇದಿತಾ ಗೌಡ. ಮೈಸೂರಿನ ಹುಡುಗಿ. ಬಿಸಿಎ ಓದುತ್ತಿರುವ ಈ ಬಾರ್ಬಿ ಡಾಲ್, ಎಕ್ಸಾಂನ್ನೂ ಬಿಟ್ಟು ಬಿಗ್‍ಬಾಸ್‍ಗೆ ಸೇರಿದ್ದಾರೆ. 

ತಮ್ಮ ಚಿತ್ರ ವಿಚಿತ್ರ ಕನ್ನಡದಿಂದಾಗಿ ಟ್ರೋಲ್ ಆದ ನಿವೇದಿತಾ, ಆ ಟ್ರೋಲ್‍ಗಳಿಂದಾನೆ ಸ್ಟಾರ್ ಕೂಡಾ ಆಗಿಬಿಟ್ಟಿದ್ದಾರೆ. ನಂಬ್ತೀರೋ ಇಲ್ವೋ... ಈಕೆಯ ಹೆಸರಲ್ಲಿ ಐದಾರು ಅಭಿಮಾನಿ ಸಂಘಗಳು ಹುಟ್ಟಿಕೊಂಡಿವೆ. ಆಕೆ ಇಂಗ್ಲಿಷ್ ಆಕ್ಸೆಂಟ್‍ನಲ್ಲಿ ಕನ್ನಡ ಮಾತನಾಡುವುದನ್ನು ನೋಡುವುದೇ ಒಂದು ಚೆಂದ. ಕೆಲವರು ಅದನ್ನು ಎಂಜಾಯ್ ಮಾಡಿದರೆ, ಇನ್ನೂ ಕೆಲವರು ಲೇವಡಿ ಮಾಡುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ. ಮೈಸೂರಿನಲ್ಲಿಯೇ ಹುಟ್ಟಿ ಬೆಳೆದ, ಗೌಡರ ಹುಡುಗಿಗೆ ಸರಿಯಾಗಿ  ಕನ್ನಡ ಬರಲ್ಲ ಅಂದ್ರೆ ಹೆಂಗೆ ಅನ್ನೋದು ಟ್ರೋಲ್ ಮಾಡೋವ್ರ ವಾದ. 

ಆದರೆ ಅವರ ತಾಯಿ ಹೇಮಾ ಹೇಳೋದೇ ಬೇರೆ. ಅವಳು ಚಿಕ್ಕ ಹುಡುಗಿಯಾಗಿದ್ದಾಗಿನಿಂದ ಹಾಗೆಯೇ ಮಾತನಾಡ್ತಾ ಇದ್ಲು. ನಮಗೂ ಖುಷಿ ಕೊಡ್ತಿತ್ತು. ಅದಾದ ಮೇಲೆ ಅದನ್ನು ನಾವು ತಿದ್ದೋಕೆ ಹೋಗಲಿಲ್ಲ. ಅವಳೂ ಹಾಗೆಯೇ ಇದ್ದುಬಿಟ್ಟಳು. ಅಷ್ಟೆ. ನಂಗೆ ನಿಮ್ಮ ಥರ ಮಾತನಾಡೋಕೆ ಆಗಲ್ಲ ಮಮ್ಮಿ ಅಂಥಾಳೆ. ಏನ್ ಮಾಡೋದು. ಅದಕ್ಕೆಲ್ಲ ಅವಳನ್ನು ಟ್ರೋಲ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ ಆಕೆಯ ತಾಯಿ.

Shivarjun Movie Gallery

Popcorn Monkey Tiger Movie Gallery