ಜಾನಿ ಜಾನಿ ಯೆಸ್ ಪಪ್ಪಾ.. ಚಿತ್ರದ ಶೂಟಿಂಗ್ ಶುರುವಾಗಿಬಿಟ್ಟಿದೆ. ಹೊಸ ಪದ್ಮಾವತಿ ಹಾಡಿನ ಶೂಟಿಂಗ್ ನಡೆಯುತ್ತಿದೆ. ಹೊಸ ಪದ್ಮಾವತಿ ಹಾಡಿನಲ್ಲಿ ದುನಿಯಾ ವಿಜಿ ಜೊತೆ ಹೆಜ್ಜೆ ಹಾಕಿರುವುದು ರಚಿತಾ ರಾಮ್.
ಆದರೆ ಕುತೂಹಲ ಅದಲ್ಲ. ಚಿತ್ರಕ್ಕೆ ಮೊದಲು ನಾಯಕಿಯಾಗಿ ಆಯ್ಕೆಯಾಗಿದ್ದವರು ರಚಿತಾ ರಾಮ್. ಆದರೆ, ಈ ಗುಳಿಗೆನ್ನೆ ಹುಡುಗಿ ಡೇಟ್ಸ್ ಸಮಸ್ಯೆ ಎಂದು ಹೇಳಿ ಚಿತ್ರದಿಂದ ಹಿಂದೆ ಸರಿದಿದ್ದರು. ಆ ನಂತರ ಆ ಜಾಗಕ್ಕೆ ಶ್ರದ್ಧಾ ಶ್ರೀನಾಥ್ ಬಂದಿದ್ದರು. ಶ್ರದ್ಧಾ ಹೀರೋಯಿನ್ ಎಂಬುದೂ ದೊಡ್ಡ ಸುದ್ದಿಯಾಗಿತ್ತು. ಆದರೆ, ಶೂಟಿಂಗ್ ಶುರುವಾಗುವ ವೇಳೆ ಶ್ರದ್ಧಾ ಹೋಗಿ ಮತ್ತೆ ರಚಿತಾ ಬಂದಿದ್ದಾರೆ.
ಏನ್ ಕಥೆ ಅಂದ್ರೆ, ಗೊತ್ತಾಗಿರೋದು ಮತ್ತದೇ ಡೇಟ್ ಸಮಸ್ಯೆ. ಈಗ ಶ್ರದ್ಧಾಗೆ ಡೇಟ್ ಸಮಸ್ಯೆಯಂತೆ. ರಚಿತಾ ಅವರ ಡೇಟ್ಸ್ ಕ್ಲಿಯರ್ ಆಗಿದೆಯಂತೆ. ಪ್ರೀತಮ್ ಗುಬ್ಬಿ ನಿರ್ದೇಶನದ ಚಿತ್ರ ಆರಂಭದಲ್ಲೇ ಇಷ್ಟೆಲ್ಲ ಸದ್ದು ಸುದ್ದಿ ಮಾಡಿದೆ.
Related Articles :-
Rachita Ram Is The Heroine For Johnny Johnny Yes Papa
Rachita Ram For Johnny Johnny Yes Papa
Duniya Vijay And Preetham Gubbi Back With Johnny Johnny Yes Papa