` ಹುಲಿ, ಹಾವು ಗೆದ್ದ ಪುಟ್ಟಗೌರಿ ಸ್ಪೀಕಿಂಗ್.. - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
puttagowri maduve trolls
PuttaGowri Reacts on Trolls

ಪುಟ್ಟಗೌರಿ ಮದುವೆ ಧಾರಾವಾಹಿಯ ಕಾಡಿನ ಸೀನ್ ಈಗ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಅದರಲ್ಲೂ ಪುಟ್ಟಗೌರಿ ಕಾಡಿನಲ್ಲಿ ಹುಲಿಯಿಂದ ಬಚಾವ್ ಆಗಿ, ಹುಲಿಯನ್ನೇ ರಕ್ಷಿಸಿದ್ದು, ಆನಕೊಂಡದಂತಾ ಹಾವನ್ನು ಪ್ರಾರ್ಥಿಸಿ ಓಡಿಸಿದ್ದು..ಒಂದಾ ಎರಡಾ.. ಇಂಥ ಟ್ರೋಲ್‍ಗಳು ಸೃಷ್ಟಿಯಾದ ನಂತರ ಪುಟ್ಟಗೌರಿ ಪಾತ್ರಧಾರಿ ರಂಜನಿ ರಾಘವನ್ ಏನಂತಾರೆ..? ಇಂಥಾದ್ದೊಂದು ಕುತೂಹಲ ಎಲ್ಲರಲ್ಲೂ ಇರುತ್ತಲ್ವಾ..?

ಟ್ರೋಲ್ ಕಾಲೆಳೆತಕ್ಕೆ ರೋಷವೂ ಇಲ್ಲ. ಆಕ್ರೋಶವೂ ಇಲ್ಲ. ಅದೊಂದು ಪಾತ್ರ. ಆ ಪಾತ್ರಕ್ಕೆ ಅಭಿಮಾನಿಗಳು ನೀಡುತ್ತಿರುವ ಪ್ರತಿಕ್ರಿಯೆ ಇದು. ಕೋಪಿಸಿಕೊಳ್ಳೋ ಅಗತ್ಯಾನೇ ಇಲ್ಲ. ಸದ್ಯಕ್ಕೆ ನಿರ್ಮಾಪಕರು, ನಿರ್ದೇಶಕರು ಖುಷಿಯಾಗಿದ್ದಾರೆ. ಹಾಗಾಗಿ ನಾನೂ ಖುಷಿಯಾಗಿದ್ದೇನೆ ಎಂದಿದ್ದಾರೆ ರಂಜನಿ ರಾಘವನ್.

ಚಿತ್ರದಲ್ಲಿನ ಆ ದೃಶ್ಯಗಳು ಬಹುತೇಕ ಗ್ರಾಫಿಕ್ಸ್ ವರ್ಕ್ ಅನ್ನೋದು ಎಲ್ಲರಿಗೂ ಗೊತ್ತಿರುತ್ತೆ. ಈ ಟ್ರೋಲ್‍ಗಳು ತಮಾಷೆಗಷ್ಟೆ. ಜನ ಚೇಂಜ್ ಕೇಳ್ತಾರೆ. ಅದನ್ನು ಹೊರತುಪಡಿಸಿ ಬೇರೆ ಯಾವ ಉದ್ದೇಶವೂ ಇಲ್ಲ. ಕೆಲವು ಟ್ರೋಲ್‍ಗಳನ್ನು ನಾವೂ ಎಂಜಾಯ್ ಮಾಡುತ್ತಿದ್ದೇವೆ ಎಂದಿದ್ದಾರೆ ರಂಜನಾ ರಾಘವನ್.

Related Articles :-

ಅಲೆಲೆಲೆಲೆ ಪುಟ್‍ಗೌರಿ.. ಏನೂ ಆಗ್ಲಿಲ್ವಾ..?

Ayushmanbhava Movie Gallery

Ellidhe Illitanaka Movie Gallery