` ಮಳೆ ಎಫೆಕ್ಟ್ - ಚಿತ್ರಮಂದಿರಗಳೂ ಗಢಗಢ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
rain effect. empty theater
Rain Hits Theater Collections Too

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ತಾರಕ್ ಥಿಯೇಟರಿನಲ್ಲಿದೆ. ಒಳ್ಳೆಯ ಅಭಿಪ್ರಾಯಗಳಿವೆ. ಕಲೆಕ್ಷನ್ನೂ ಚೆನ್ನಾಗಿದೆ. ಧ್ರುವ ಸರ್ಜಾ ಅಭಿನಯದ ಸಿನಿಮಾ ಕೂಡಾ ಚೆನ್ನಾಗಿ ಓಡುತ್ತಿದೆ. ಹಲವು ಹೊಸಬರ ಸಿನಿಮಾಗಳು ಉತ್ತಮ ಪ್ರತಿಕ್ರಿಯೆ ಪಡೆಯುತ್ತಿವೆ. ಆದರೂ.. ಚಿತ್ರಮಂದಿರಗಳಿಗೆ ಜನರಿಲ್ಲ. ಏಕೆಂದು ನೋಡಿದರೆ, ಎಲ್ಲರೂ ಈಗ ಮಳೆಯತ್ತ ಬೊಟ್ಟು ತೋರಿಸುತ್ತಿದ್ದಾರೆ. ಮಳೆಯ ಅಬ್ಬರಕ್ಕೆ ಬೆಂಗಳೂರಿನ ಜನರಷ್ಟೇ ಅಲ್ಲ, ಚಿತ್ರಮಂದಿರಗಳೂ, ಚಿತ್ರರಂಗವೂ ನಡುಗುವಂತಾಗಿದೆ.

ಕಳೆದ 60 ದಿನಗಳಲ್ಲಿ ಸುಮಾರು 50 ದಿನ ಮಳೆ ಸುರಿದಿದೆ. ಆ 50 ದಿನಗಳಲ್ಲಿ ಕನಿಷ್ಠ 30 ದಿನ ಧಾರಾಕಾರ ಮಳೆ ಬಂದಿದೆ. ಈ ವರ್ಷ ದಾಖಲೆಯ 1615 ಮಿಮೀ ಮಳೆಯಾಗಿದೆ. ಆದರೆ, ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆಯಲ್ಲೂ ಇಳಿಮುಖವಾಗಿದೆ. 

ಮೊದಲಿದ್ದ ಕಲೆಕ್ಷನ್​ಗೆ ಹೋಲಿಸಿದರೆ, ಶೇ.25ರಷ್ಟು ಕಲೆಕ್ಷನ್ ಕುಸಿದಿದೆಯಂತೆ. ಅದರಲ್ಲೂ ಫಸ್ಟ್ ಶೋ ಮತ್ತು ಸೆಕೆಂಡ್ ಶೋಗಳಿಗೆ ಜನ ಬರುತ್ತಿಲ್ಲ. ಕಾರಣ, ಮಳೆ. ಸಿನಿಮಾ ಶೋ ಬಿಡುವ ಹೊತ್ತಿಗೆ ಸರಿಯಾಗಿ ಮಳೆ ರಸ್ತೆಯನ್ನು ನದಿಯನ್ನಾಗಿಸಿರುತ್ತೆ. ಆ ಟ್ರಾಫಿಕ್ಕು, ಮಳೆಯ ನಡುವೆ ಕಷ್ಟಪಡೋದಕ್ಕಿಂತ ಮನೆಯಲ್ಲಿರೋದೇ ವಾಸಿ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಜನ. 

ಹೀಗಾಗಿ ಗಾಂಧಿನಗರದ ಮಂದಿಯೂ ಮಳೆಗೆ ನಲುಗಿದ್ದಾರೆ. ಚಿತ್ರಗಳ ಕಲೆಕ್ಷನ್ನೂ ಕುಸಿಯುತ್ತಿದೆ. ಸ್ಟಾರ್​ಗಳ ಚಿತ್ರಗಳಾದರೆ ವಾಸಿ..ಆದರೆ, ಹೊಸಬರ ಚಿತ್ರಗಳಂತೂ ಮಳೆಯ ಆರ್ಭಟದ ಮಧ್ಯೆ ಕೊಚ್ಚಿ ಹೋಗಿವೆ. ಸಂಜೆ ಮಳೆ ಬಂದರಂತೂ ಚಿತ್ರಮಂದಿರಗಳ ಕಲೆಕ್ಷನ್ನು ಪಾತಾಳಕ್ಕಿಳಿದುಬಿಡುತ್ತೆ ಎಂದು ಅಳಲು ತೋಡಿಕೊಂಡಿದ್ದಾರೆ ಚಿತ್ರಮಂದಿರ ಮಾಲೀಕರು. ನಿರ್ಮಾಪಕರ ಕಥೆ ಕೂಡಾ ಭಿನ್ನವೇನಲ್ಲ.

Geetha Movie Gallery

Upendra Birthday Celebration Gallery