ವಿನೋದ್ ಪ್ರಭಾಕರ್ ಅಭಿನಯದಲ್ಲಿ ಓಂಪ್ರಕಾಶ್ ರಾವ್ ಒಂದು ಚಿತ್ರ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಹಳೆಯದು. ಈಗ ಆ ಚಿತ್ರಕ್ಕೆ ಟೈಟಲ್ ಫೈನಲ್ ಆಗಿದೆ. ಚಿತ್ರದ ಹೆಸರು ವೇದ-ವ್ಯಾಸ. ಚಿತ್ರದ ಫೋಟೋಶೂಟ್ ಕೂಡಾ ಮುಗಿದಿದೆ.
ಅಂದಹಾಗೆ ಚಿತ್ರದಲ್ಲಿ ಹೀರೋ ವಿನೋದ್ ಪ್ರಭಾಕರ್ ಒಬ್ಬರೇ ಅಲ್ಲ. ಮದರಂಗಿ ಕೃಷ್ಣ ಸಹ ನಟಿಸುತ್ತಿದ್ದಾರೆ. ಮಂಡ್ಯದಲ್ಲಿ 1973-74ರಲ್ಲಿ ನಡೆದ ನೈಜ ಘಟನೆ ಆಧರಿಸಿ ಕಥೆ ರಚಿಸಲಾಗಿದೆಯಂತೆ. ಚಿತ್ರಕ್ಕೆ ಕಥೆ ಬರೆದಿರುವುದು ಓಂಪ್ರಕಾಶ್ ರಾವ್ ಅವರ ಪತ್ನಿ ಡೆನ್ನಿಸಾ ಪ್ರಕಾಶ್.
ರೇಣುಕಾ ಮೂವಿ ಮೇಕರ್ ಬ್ಯಾನರ್ನಲ್ಲಿ ಎ.ಎಂ. ಉಮೇಶ್ ರೆಡ್ಡಿ ನಿರ್ಮಿಸುತ್ತಿರುವ ಚಿತ್ರದ ಚಿತ್ರೀಕರಣ ಡಿಸೆಂಬರ್ 3ರಿಂದ ಆರಂಭವಾಗಲಿದೆ. ಚಿತ್ರಕ್ಕೆ ಸಂಗೀತ ಹಾಗೂ ಸಾಹಿತ್ಯ ಒದಗಿಸುತ್ತಿರುವುದು ಹಂಸಲೇಖ.
ಚಿತ್ರಕಥೆ, ನಿರ್ದೇಶನದ ಹೊಣೆ ಹೊತ್ತಿರುವ ಓಂಪ್ರಕಾಶ್ ರಾವ್, ಇನ್ನೂ ನಾಯಕಿಯನ್ನು ಫೈನಲ್ ಮಾಡಿಲ್ಲ.