` ಅಂಬಿ ನಿಂಗೆ ವಯಸ್ಸಾಯ್ತೋ.. - ಸುದೀಪ್ ಹೇಳಿದ್ದು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ambi sudeep at veera parampare pressmeet
Ambareesh, Sudeep Image

ಅಂಬಿ ನಿಂಗೆ ವಯಸ್ಸಾಯ್ತೋ.. ಈ ಚಿತ್ರವನ್ನು ಅಂಬರೀಷ್ ಹಾಗೂ ಸುದೀಪ್ ಒಟ್ಟಿಗೇ ಮಾಡ್ತಿರೋದು ಗೊತ್ತಿರುವ ವಿಚಾರ. ಅದು ತಮಿಳಿನ ಪವರ್ ಪಾಂಡಿ ಚಿತ್ರದ ರೀಮೇಕ್. ಸಿನಿಮಾ ಸಿದ್ಧವಾಗ್ತಿರೋದು ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‍ನಲ್ಲಿ. ಅಂದಹಾಗೆ ಆ ಚಿತ್ರಕ್ಕೆ ಆ ಟೈಟಲ್ ಇಟ್ಟಿರುವುದು ಸ್ವತಃ ಸುದೀಪ್.

ಅಂಬರೀಷ್ ಅವರಿಗೆ ಈ ಸಿನಿಮಾ ಮಾಡಬೇಕು ಎಂದು ಸುದೀಪ್ ಅವರಿಗೆ ತುಂಬಾ ದಿನಗಳ ಅನಿಸಿತ್ತಂತೆ. ಅಂಬರೀಷ್ ಅವರ ಫ್ರೆಶ್‍ನೆಸ್ ಮತ್ತು ಎನರ್ಜಿ ಇಷ್ಟವಾಗಿ ಸಿನಿಮಾ ಮಾಡುವ ನಿರ್ಧಾರ ತೆಗೆದುಕೊಂಡರಂತೆ. ಈ ಚಿತ್ರವನ್ನು ಸುದೀಪ್ ನಿರ್ಮಾಣ ಮಾಡುತ್ತಿದ್ದಾರಾದರೂ, ನಿರ್ದೇಶನ ಅವರದ್ದಲ್ಲ. ಬಹುಶಃ ನಂದಕಿಶೋರ್ ಚಿತ್ರದ ನಿರ್ದೇಶಕರಾಗಬಹುದು ಎಂದಿದ್ದಾರೆ ಸುದೀಪ್.

ಅಂಬರೀಷ್‍ಗೂ ಚಿತ್ರದ ಕಥೆ ಮತ್ತು ಥೀಮ್ ಇಷ್ಟವಾಗಿದೆ. ವಯಸ್ಸಾದವರ ಪಾತ್ರದಲ್ಲಿ ಕಾಣಿಸಿಕೊಳ್ಳೋದನ್ನು ಬಹುತೇಕರು ಒಪ್ಪಿಕೊಳ್ಳೋದಿಲ್ಲ. ಆದರೆ, ಇದು ಅಂಬರೀಷ್ ಅವರಿಗೆ ಸೂಕ್ತವಾದ ಪಾತ್ರ. ಅವರೇ ಮಾಡಬೇಕು ಎಂದಿದ್ದಾರೆ ಸುದೀಪ್. ಸ್ವತಃ ಅಂಬರೀಷ್ ತಾವಾಗಿ ಚಿತ್ರ ಹಾಗೂ ಕಥೆಯ ಡಿಸ್ಕಷನ್‍ಗೆ ಬರುತ್ತಿರುವುದು ಸುದೀಪ್ ಅವರಿಗೂ ಖುಷಿಕೊಟ್ಟಿದೆ. ಚಿತ್ರದಲ್ಲಿ ಸುದೀಪ್ ಕೂಡಾ ನಟಿಸುತ್ತಿದ್ದಾರೆ. ಅವರು ಚಿತ್ರದಲ್ಲಿ ಅಂಬರೀಷ್ ಯವಕರಾಗಿದ್ದಾಗಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

#

Gubbi Mele Bramhastra Movie Gallery

Rightbanner02_gimmick_inside

Nanna Prakara Audio Release Images