` ಅಲೆಲೆಲೆಲೆ ಪುಟ್‍ಗೌರಿ.. ಏನೂ ಆಗ್ಲಿಲ್ವಾ..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
puttagowri trolles creates trend
Trolls On PuttaGowri

ಪುಟ್ಟ ಗೌರಿ ಬೆಟ್ಟದಿಂದ ಬಿದ್ದಳು. ಮೇಕಪ್ ಹಾಳಾಗಲಿಲ್ಲ. ಮರ ಹತ್ತಿದರೂ, ಸೀರೆಯ ನೆರಿಗೆ ಕದಲಲಿಲ್ಲ. ಮಂತ್ರ ಹೇಳಿ ಕಚ್ಚಲು ಬಂದಿದ್ದ ಹಾವನ್ನೇ ಓಡಿಸಿದ ಜಗತ್ತಿನ ಏಕೈಕ ದಿಟ್ಟ ಹೆಣ್ಣು ಪುಟ್ಟ ಗೌರಿ.

ಎಷ್ಟೇ ತುಳಿದರೂ ಬೆಳೆಯುತ್ತಂತೆ ಹುಲ್ಲು. ಆದರೂ ಮುಗಿಯಲ್ಲ ಪುಟ್ಟಗೌರಿ ಸೀರಿಯಲ್ಲು.  ಹುಲಿ ತಿನ್ನಾಕ ಪುಟ್‍ಗೌರಿ ಕಾಡಿಗೆ ಹೋಗ್ಯಾಳ. ಮೊದ್ಲಾ ನಮ್ ದೇಶದಾಗ ಹುಲಿಗಳ ಸಂಖ್ಯೆ ಕಡ್ಮಿ ಐತಿ. ಹುಲಿ ತಿನ್‍ಬ್ಯಾಡಾ ಅಂತಾ ಗೌರಿಗೆ ಹೇಳ್ರಪ್ಪೋ.. ಮರದಲ್ಲಿ ನೇತಾಡುತ್ತಿರುವ ಪುಟ್ಟಗೌರಿಯನ್ನು ರಕ್ಷಿಸಲು ಯಾರಾದರೂ ತಲುಪುವವರೆಗೂ ಫೇಸ್‍ಬುಕ್‍ನಲ್ಲಿ, ವಾಟ್ಸಪ್‍ನಲ್ಲಿ ಫೋಟೋ ಶೇರ್ ಮಾಡಿ. 

ಇದೆಲ್ಲ ಪುಟ್‍ಗೌರಿ ನೋಡಿದ ಪ್ರೇಕ್ಷಕರು ಶಾಕ್‍ನಲ್ಲಿ ಕೊಡ್ತಾ ಇರೋ ಹೇಳಿಕೆಗಳು. ಬಹುಶಃ ಪುಟ್ಟಗೌರಿ ಸೀರಿಯಲ್‍ನಷ್ಟು ಟ್ರೋಲ್ ಆದ ಇನ್ನೊಂದು ಸೀರಿಯಲ್ ಇತ್ತೀಚೆಗೆ ಇರಲಿಲ್ಲ. ಈಗ ಸದ್ಯಕ್ಕೆ ಪುಟ್ಟಗೌರಿ ಕಾಡಿನಲ್ಲಿದ್ದಾಳೆ. ಪ್ರೇಕ್ಷಕರು ಶಾಕ್‍ನಲ್ಲಿದ್ದಾರೆ. ಇದು ಪುಟ್‍ಗೌರಿ ಮದುವೆ ಅನ್ನೋದು ಸೀರಿಯಲ್‍ನ ಟೈಟಲ್ ಸಾಂಗ್ ಅಷ್ಟೇ ಅಲ್ಲ, ಟ್ರೋಲ್ ಹೈಕ್ಳ ರಾಷ್ಟ್ರಗೀತೆಯೂ ಆಗಿಬಿಟ್ಟಿದೆ.

Yajamana Movie Gallery

Bazaar Movie Gallery