ಮಜಾ ಟಾಕೀಸ್. ಕಳೆದ 3 ವರ್ಷಗಳಿಂದ ಕಿರುತೆರೆ ವೀಕ್ಷಕರನ್ನು ನಕ್ಕು ನಲಿಸುತ್ತಿದ್ದ ಕಾರ್ಯಕ್ರಮ. ಸೃಜನ್ ಲೋಕೇಶ್ ಮಜಾ ಸೃಜನ್ ಎಂದೇ ಖ್ಯಾತರಾದರು. ಇಂದ್ರಜಿತ್ ಲಂಕೇಶ್ ನಗುವಿನ ಸರದಾರರಾದರು. ಅಪರ್ಣಾ, ಮಂಡ್ಯ ರಮೇಶ್, ವಿ. ಮನೋಹರ್, ಶ್ವೇತಾ ಚೆಂಗಪ್ಪ, ಕುರಿ ಪ್ರತಾಪ್, ಮಿಮಿಕ್ರಿ ದಯಾನಂದ್, ರೆಮೋ, ಪವನ್ ಮೊದಲಾದವರೆಲ್ಲ ಕಾರ್ಯಕ್ರಮದಿಂದ ಖ್ಯಾತರಾಗಿದ್ದರು.
ಸತತ 3 ವರ್ಷಗಳ ಕಾಲ, 200ಕ್ಕೂ ಹೆಚ್ಚು ಎಪಿಸೋಡ್ ಕಂಡ ಮಜಾ ಟಾಕೀಸ್, ಈ ದೀಪಾವಳಿಗೆ ಮುಕ್ತಾಯವಾಗಲಿದೆ. ಒಂದು ಸುದೀರ್ಘ ಪಯಣ ಕೊನೆಯಾಗುತ್ತಿದೆ ಎಂದು ಸೃಜನ್ ಲೋಕೇಶ್ ಹೇಳಿಕೊಂಡಿದ್ದಾರೆ. ಬೆಂಗಳೂರಿನಲ್ಲಿಯೇ ಮಜಾ ಟಾಕೀಸ್ ಗ್ರ್ಯಾಂಡ್ ಫಿನಾಲೆ ನಡೆದಿದ್ದು, ದೀಪಾವಳಿ ವಿಶೇಷ ಸಂಚಿಕೆಯಾಗಿ ಅದು ಪ್ರಸಾರವಾಗಲಿದೆ. ಅಲ್ಲಿಗೆ ಮಜಾ ಟಾಕೀಸ್ ಶುಭಂ.
ಮುಂದೇನು..? ಸೃಜನ್ ಲೋಕೇಶ್ ತಲೆಯಲ್ಲಿ ಇನ್ಯಾವ ಹೊಸ ಮಜಾ ಆಲೋಚನೆ ಓಡುತ್ತಿದೆಯೋ..ಏನೋ..