ಟೈಗರ್ ಗಲ್ಲಿ. ನೀನಾಸಂ ಸತೀಶ್ ಅಭಿನಯದ ಸಿನಿಮಾ. ಇದೇ ಅಕ್ಟೋಬರ್ 27ಕ್ಕೆ ರಿಲೀಸ್ ಆಗುತ್ತಿದೆ. ನೀನಾಸಂ ಸತೀಶ್ರ ಮಾಸ್ ಲುಕ್ ಹಾಗೂ ಚಿತ್ರವನ್ನು ನೋಡಿ ಮೆಚ್ಚಿಕೊಂಡಿರುವ ಸುದೀಪ್, ಸ್ವತಃ ಚಿತ್ರವನ್ನು ಪ್ರಮೋಟ್ ಮಾಡುತ್ತಿರುವುದು ಚಿತ್ರದ ನಿರೀಕ್ಷೆ ಹೆಚ್ಚಿಸಿದೆ.
ಆದರೆ, ಈ ಚಿತ್ರ ನೀನಾಸಂ ಪಾಲಗೆ ದಕ್ಕಿದ್ದರ ಹಿಂದೊಂದು ಕಥೆಯಿದೆ. ಚಿತ್ರದ ಕಥೆಯನ್ನು ರೆಡಿ ಮಾಡಿಕೊಂಡು ನಿರ್ಮಾಪಕ ಎನ್.ಎಂ. ಕುಮಾರ್ ಅವರಿಗೆ ಹೇಳಿದಾಗ, ಅವರು ಕಥೆಗೆ ಓಕೆ ಹೇಳಿದರಂತೆ. ಇನ್ನು ನಾಯಕನನ್ನು ಸೆಲೆಕ್ಟ್ ಮಾಡು. ಆದರೆ, ಯಾವುದೇ ಕಾರಣಕ್ಕೂ ಕಥೆ ಬದಲಾಯಿಸಬೇಡ ಎಂದರಂತೆ. ಆದರೆ, ರವಿ ಶ್ರೀವತ್ಸ ಸಂಪರ್ಕಿಸಿದ ಮೂವರು ಹೀರೋಗಳೂ ಕಥೆಯಲ್ಲಿ ಬದಲಾವಣೆಯಾಗಬೇಕು.. ತನ್ನ ಪಾತ್ರವೇ ಹೈಲೈಟ್ ಆಗಬೇಕು ಎಂದು ಹೇಳಿದಾಗ, ರವಿ ಶ್ರೀವತ್ಸ ಅವರ ತಲೆಗೆ ಹೊಳೆದಿದ್ದು ನೀನಾಸಂ ಸತೀಶ್.
ಈಗ ರವಿ ಶ್ರೀವತ್ಸ ಅವರಿಗೆ ನೀನಾಸಂ ಅಭಿನಯ ನೋಡಿದ ಮೇಲೆ, ನನ್ನ ಆಯ್ಕೆ ಸರಿಯಾಗಿದೆ ಎನಿಸಿದೆ. ಸಿನಿಮಾ ನೋಡಿದ ಮೇಲೆ ಆ ಮೂವರೂ ಹೀರೋಗಳು ಅಯ್ಯೋ.. ನಾನು ಈ ಸಿನಿಮಾ ಮಿಸ್ ಮಾಡಿಕೊಂಡೆ ಎಂದು ಹೇಳಿಯೇ ಹೇಳ್ತಾರೆ ಅನ್ನೋ ಆತ್ಮವಿಶ್ವಾಸ ರವಿ ಶ್ರೀವತ್ಸಗೆ ಇದೆ.