` ಅ.27ಕ್ಕೆ ಸುದೀಪ್ V/S ಸುದೀಪ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
sudeep, sathish ninasam
Sudeep, Sathish Ninasam, Raju Kannada Medium Image

ಗಾಂಧಿನಗರದಲ್ಲಿ ಒಬ್ಬ ಸ್ಟಾರ್ ನಟರ ಚಿತ್ರದ ಎದುರು ಮತ್ತೊಬ್ಬ ಸ್ಟಾರ್ ನಟರ ಚಿತ್ರ ರಿಲೀಸ್ ಆಗಲ್ಲ. ಕೆಲವು ವರ್ಷಗಳ ಹಿಂದೆ ಇಂತಹ ಘಟನೆಗಳು ಆಗಾಗ್ಗೆ ನಡೆಯುತ್ತಿದ್ದವಾದರೂ, ನಟರೇ ಈ ಬಗ್ಗೆ ಎಚ್ಚೆತ್ತುಕೊಂಡರು. ಒಂದರ ಹಿಂದೊಂದು ಸಿನಿಮಾಗಳು ರಿಲೀಸ್ ಆದರೂ, ಗ್ಯಾಪ್ ಇರುವಂತೆ ನೋಡಿಕೊಳ್ತಾರೆ. ಆದರೆ, ಈ ವಿಷಯ ಹಾಗಲ್ಲ. ಇಲ್ಲಿ ಸುದೀಪ್ ವ/ಸ ಸುದೀಪ್ ಸಮರ ಶುರುವಾಗಿದೆ.

ಅಕ್ಟೋಬರ್ 27ರಂದು ರಾಜು ಕನ್ನಡ ಮೀಡಿಯಂ ಚಿತ್ರ ರಿಲೀಸ್ ಆಗುತ್ತಿದೆ. ಆ ಚಿತ್ರದಲ್ಲಿ ಸುದೀಪ್ ನಾಯಕರೇನಲ್ಲ. ಅತಿಥಿ ನಟ. ಇನ್ನು ಅದೇ ದಿನ ಟೈಗರ್ ಗಲ್ಲಿ ಕೂಡಾ ರಿಲೀಸ್ ಆಗುತ್ತಿದೆ. ಈ ಚಿತ್ರದ ಹೀರೋ ನೀನಾಸಂ ಸತೀಶ್. ಟೈಗರ್ ಗಲ್ಲಿ ಚಿತ್ರದ ಬಗ್ಗೆ ಸ್ವತಃ ಸುದೀಪ್ ವೈಯಕ್ತಿಕ ಆಸಕ್ತಿ ತೋರಿಸಿದ್ದಾರೆ. ಚಿತ್ರ ಚೆನ್ನಾಗಿದೆ ಎಂದು ಪ್ರಮೋಟ್ ಮಾಡುತ್ತಿದ್ದಾರೆ. ಹೀಗಾಗಿ ಸುದೀಪ್ ಅವರ ಪ್ರೀತಿಯ ಎರಡು ಚಿತ್ರಗಳು ಒಂದೇ ದಿನ ತೆರೆಕಾಣುತ್ತಿವೆ. 

ಇನ್ನೂ ಒಂದು ವಿಚಾರ ಇದೆ. ಇದೇ ಅಕ್ಟೊಬರ್‍ನಲ್ಲಿ ಬಿಗ್‍ಬಾಸ್ ಶುರುವಾಗುತ್ತಿದೆ. ಕಿರುತೆರೆಯಲ್ಲಿ ಸುದೀಪ್ ಅವರೇ ಇರ್ತಾರೆ. ವಾರ್ ಇಷ್ಟಕ್ಕೇ ಮುಗಿಯಲ್ಲ.

Related Articles :-

Sudeep Vs Sudeep on October 27

Adi Lakshmi Purana Movie Gallery

Rightbanner02_butterfly_inside

Yaana Movie Gallery