ದರ್ಶನ್ ಅವರ ತಾರಕ್ ಚಿತ್ರಮಂದಿರದಲ್ಲಿ ಭರ್ಜರಿ ಸದ್ದು ಮಾಡ್ತಾ ಇದೆ. ಈ ಬಗ್ಗೆ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿರುವ ದರ್ಶನ್, 50ನೇ ಚಿತ್ರವಾದ "ಕುರುಕ್ಷೇತ್ರ' ಮುಂದಿನ ವರ್ಷ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ. ಸದ್ಯಕ್ಕೆ ನಾನು ಕುರುಕ್ಷೇತ್ರದಲ್ಲಿ ಬ್ಯುಸಿ. ಅದರ ವಿವರವನ್ನೂ ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದಿದ್ದಾರೆ ದರ್ಶನ್. ದರ್ಶನ್ ಅವರ 51 ಮತ್ತು 52 ಚಿತ್ರಗಳ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿರುವ ಬಗ್ಗೆ ಫುಲ್ಸ್ಟಾಪ್ನ್ನೂ ಇಟ್ಟಿದ್ದಾರೆ.
51ನೇ ಚಿತ್ರವಾಗಿ ಸಂದೇಶ್ ನಾಗರಾಜ್ ನಿರ್ಮಾಣದ "ಒಡೆಯರ್' ಬರುತ್ತಾ..? ಬಿ. ಸುರೇಶ ನಿರ್ಮಾಣದ ಚಿತ್ರ ಬರುತ್ತಾ..? ಎಂ.ಡಿ. ಶ್ರೀಧರ್ ನಿರ್ದೇಶನದ ಸಿನಿಮಾ ಬರುತ್ತಾ ಎಂಬ ಬಗ್ಗೆ ಸದ್ಯಕ್ಕೆ ತಲೆ ಕೆಡಿಸಿಕೊಳ್ಳಬೇಡಿ.
ಗಾಳಿಸುದ್ದಿಗಳು ಸದ್ಯಕ್ಕೆ ಬೇಡ.ಸಮಯ ಬಂದಾಗ ಅದರ ಸಂಪೂರ್ಣ ವಿವರಗಳನ್ನು ಎಲ್ಲರಿಗೂ ತಿಳಿಸುತ್ತೇನೆ ಎಂದು ತಿಳಿಸಿದ್ದಾರೆ ದರ್ಶನ್.
ನಿಮ್ಮ ಪ್ರೀತಿ-ಪ್ರೋತ್ಸಾಹ ನಮ್ಮಂಥ ಚಿಕ್ಕ ಕಲಾವಿದರ ಮೇಲೆ ಸದಾ ಇರಲಿ. "ತಾರಕ್' ಚಿತ್ರಕ್ಕೆ ಬೆನ್ನುತಟ್ಟಿ ನೀವು ತೋರುತ್ತಿರುವ ಪ್ರೀತಿಗೆ ನಾವು ಸದಾ ಚಿರಋಣಿ, ಎಲ್ಲರೂ ತಾರಕ್ ನೋಡಿ ಹರಸಿ - ನಿಮ್ಮ ದಾಸ ದರ್ಶನ್' ಎಂದು ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಹಾಗಾದರೆ, ದರ್ಶನ್ರ 51,52,53ನೇ ಸಿನಿಮಾಗಳ ಸುದ್ದಿಗಳು ನಿಲ್ಲುತ್ತವಾ..? ನೋಡೋಣ.