ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಮಧ್ಯೆ ಪ್ರೀತಿಯಿದೆ.. ಅವರಿಬ್ಬರೂ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡಲು ಶುರುವಾಗಿ 2 ವರ್ಷಗಳೇ ಕಳೆದುಹೋದವು. ಊಹೂಂ.. ಸುದ್ದಿ ನಿಜವಾಗಲಿಲ್ಲ.
ಇಬ್ಬರೂ ಎರಡು ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದರು. ಪ್ರೀತಿ ಮದುವೆ ಸುದ್ದಿಗೆ ರೆಕ್ಕೆ ಪುಕ್ಕ ಬಂದವು. ಖಾಸಗಿ ಸಮಾರಂಭಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡರು. ಸುದ್ದಿಯ ಗಿಡ ಬೆಳೆದು ಹೆಮ್ಮರವಾಗೋಕೆ ಗೊಬ್ಬರ ಸಿಕ್ಕಂತಾಯ್ತು. ಮಧ್ಯೆ ಮಧ್ಯೆ ಇಬ್ಬರೂ ತಮ್ಮ ಮಧ್ಯೆ ಅಂಥದ್ದೇನೂ ಇಲ್ಲ ಎಂದು ಹೇಳುತ್ತಲೇ ಬಂದರು.
ಈಗ ಮತ್ತೊಂದು ಹೊಸ ಸುದ್ದಿ. ಇಬ್ಬರೂ ಡಿಸೆಂಬರ್ 2ನೇ ವಾರದಲ್ಲಿ ಸಪ್ತಪದಿ ತುಳಿಯುತ್ತಿದ್ದಾರಂತೆ. ಈ ಬಾರಿಯೂ ಮೇಘನಾ ಮತ್ತು ಚಿರಂಜೀವಿ ಸರ್ಜಾ, ಇದನ್ನು ನಿರಾಕರಿಸಿದ್ದಾರೆ. ತಮ್ಮ ಮದುವೆ ಬಗ್ಗೆಯೇ ಏಕೆ ಇಷ್ಟೊಂದು ಸುದ್ದಿ ಹಬ್ಬುತ್ತವೋ ನಮಗೂ ಗೊತ್ತಿಲ್ಲ ಎಂದಿದ್ದಾರೆ.