ಚಿತ್ರರಂಗಕ್ಕೆ ಬಂದು ಮಿಂಚುತ್ತಿರುವವರಲ್ಲಿ ಒಬ್ಬೊಬ್ಬರದ್ದೂ ಒಂದೊಂದು ಕಥೆ. ಕೆಲವರು ಆಕಸ್ಮಿಕವಾಗಿ ಕಾಲಿಟ್ಟರೆ, ಇನ್ನೂ ಕೆಲವರು ಅದಕ್ಕಾಗಿ ಬೆವರು ಸುರಿಸಿ ಚಿತ್ರರಂಗಕ್ಕೆ ಬಂದವರು. ಮಂಡ್ಯ ರಮೇಶ್ ಅವರದ್ದು ಇನ್ನೊಂಥರಾ ಕಥೆ.
ಚಿತ್ರರಂಗಕ್ಕೆ ಬರುವ ಮುನ್ನ ಮಂಡ್ಯ ರಮೇಶ್, ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ನಟ. ಈಗಲೂ ಅವರು ರಂಗಭೂಮಿಯಲ್ಲೇ ಹೆಚ್ಚು ಸಕ್ರಿಯ. ಅಲ್ಲಿ ಇಲ್ಲಿ ನಾಟಕ ಮಾಡಿಕೊಂಡು ಓಡಾಡುತ್ತಿದ್ದ ಮಂಡ್ಯ ರಮೇಶ್ ಚಿತ್ರರಂಗಕ್ಕೆ ಬಂದಿದ್ದು `ಜನುಮದ ಜೋಡಿ' ಚಿತ್ರದ ಮೂಲಕ.
ಸಿನಿಮಾ ಬಗ್ಗೆ ಅಷ್ಟೇನೂ ಪ್ರೀತಿಯಿಲ್ಲದ ಮಂಡ್ಯ ರಮೇಶ್, ಮೊದಲು ಆ ಚಿತ್ರವನ್ನು ನಿರಾಕರಿಸಿದ್ದರಂತೆ. ಆದರೆ, ಯಾವಾಗ ಆ ಸಿನಿಮಾವನ್ನು ರಾಜ್ ಬ್ಯಾನರ್ ನಿರ್ಮಿಸುತ್ತಿದೆ ಎಂದು ಗೊತ್ತಾಯಿತೋ, ತಕ್ಷಣ ಒಪ್ಪಿಕೊಂಡುಬಿಟ್ಟರಂತೆ.
ಕಾರಣವೇನು ಗೊತ್ತಾ..? ಅದು ರಾಜ್ ಬ್ಯಾನರ್ ಚಿತ್ರ. ಹೀಗಾಗಿ ರಾಜ್ ಕುಮಾರ್ ಅವರನ್ನು ಹತ್ತಿರದಿಂದ ನೋಡಬಹುದು. ಅದೊಂದೇ ಕಾರಣಕ್ಕೆ ಜನುಮದ ಜೋಡಿ ಒಪ್ಪಿಕೊಂಡೆ. ನಂತರ ಚಿತ್ರರಂಗ ನಡೆಸಿಕೊಂಡು ಹೋಯಿತು ಎಂದು ತಮ್ಮ ಅನುಭವ ಹೇಳಿಕೊಂಡಿದ್ದಾರೆ ಮಂಡ್ಯ ರಮೇಶ್.