` ಅಂಬಿ ನಿಂಗೆ ವಯಸ್ಸಾಯ್ತಾ..? - ಶಿಫಾರಸು ರಜಿನಿಕಾಂತ್‍ರದ್ದು..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
rajanikanth ambi during ambi's 60th birthday
Ambareesh, Rajanikanth Image

ಅಂಬಿ ನಿಂಗೆ ವಯಸ್ಸಾಯ್ತಾ..? ಇದು ರೆಬಲ್‍ಸ್ಟಾರ್ ಅಂಬರೀಷ್ ಅಭಿನಯಿಸುತ್ತಿರುವ ಸಿನಿಮಾ. ಆ ಸಿನಿಮಾದಲ್ಲಿ ಅಂಬರೀಷ್ ಮತ್ತು ಸುದೀಪ್ ಜೊತೆಗೇ ನಟಿಸಲಿದ್ದಾರೆ. ಅಂದಹಾಗೆ ಈ ಚಿತ್ರಕ್ಕೆ ಅಂಬರೀಷ್ ಸೂಕ್ತ ಆಯ್ಕೆ ಎಂದು ಹೇಳಿದ್ದು ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜಿನಿಕಾಂತ್.

ಇದು ವೊರಿಜಿನಲ್ ಅಲ್ಲ. ತಮಿಳಿನ ಪಾ ಪಾಂಡಿ ಚಿತ್ರದ ರೀಮೇಕ್. ಅದು ರಜಿನಿ ಅವರ ಅಳಿಯ ಧನುಷ್ ನಟಿಸಿದ್ದ ಸಿನಿಮಾ. ಅದರಲ್ಲಿ ರಾಜ್‍ಕಿರಣ್ ಸ್ಟಂಟ್‍ಮ್ಯಾನ್ ಆಗಿ ಕಾಣಿಸಿಕೊಂಡಿದ್ದರು. ಅದು ವೃತ್ತಿಯಿಂದ ನಿವೃತ್ತರಾದ ನಂತರ ವೃದ್ಧನೊಬ್ಬ ಅನುಭವಿಸುವ ಸಮಸ್ಯೆಗಳ ಕಥೆ. ಹಾಗೆ ತನ್ನ ಉಳಿತಾಯದ ಹಣದಲ್ಲಿ ಬುಲೆಟ್ ಮೇಲೆ ಹಳೆಯ ಪ್ರೇಮಿಯನ್ನು ಹುಡುಕುತ್ತಾ ಹೊರಡುವ ರಾಜ್‍ಕಿರಣ್, ದಾರಿಯಲ್ಲಿ ತನ್ನ ಯೌವ್ವನದ ದಿನಗಳ ಪ್ರೇಮ ಕಥೆ ಹೇಳುತ್ತಾ ಹೋಗುತ್ತಾನೆ.

ಆ ಯೌವ್ವನದ ದಿನಗಳ ಯುವಕನ ಪಾತ್ರದಲ್ಲಿ ನಟಿಸಿದ್ದವರು ಧನುಷ್. ಆ ಪಾತ್ರವನ್ನು ಕನ್ನಡದಲ್ಲಿ ಮಾಡುತ್ತಿರುವುದು ಕಿಚ್ಚ ಸುದೀಪ್. ವಯಸ್ಸಾದ ಮೇಲಿನ ಪಾತ್ರ ಅಂಬರೀಷ್ ಅವರದ್ದು.

ಅದ್ಭುತ ಭಾವನೆಗಳ ಸಮ್ಮಿಲನವಾಗಿರುವ ಈ ಚಿತ್ರದಲ್ಲಿ ಅಂಬರೀಷ್ ಮತ್ತು ಸುದೀಪ್‍ಗೆ ಅಭಿಯನಯಕ್ಕೆ ಭರಪೂರ ಅವಕಾಶಗಳಿವೆ. ಕಥೆಯೇ ವಿಭಿನ್ನವಾಗಿದ್ದು, ಆ ಚಿತ್ರವನ್ನು ನಿರ್ದೇಶಿಸುತ್ತಿರುವುದು ನಂದಕಿಶೋರ್.

ಈ ಹಿಂದೆ ವೀರಪರಂಪರೆ ಚಿತ್ರದಲ್ಲಿ ಅಂಬಿ ಮತ್ತು ಸುದೀಪ್ ಒಟ್ಟಿಗೇ ಅಭಿನಯಿಸಿದ್ದರು. ಈಗ 8 ವರ್ಷಗಳ ನಂತರ ತೆರೆಯ ಮೇಲೆ ಮತ್ತೆ ಅಂಬಿ ಮತ್ತು ಸುದೀಪ್ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಇತ್ತೀಚೆಗೆ ಪೋಷಕ ಪಾತ್ರಗಳಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಅಂಬರೀಷ್, ಬಹಳ ವರ್ಷಗಳ ನಂತರ ಲೀಡ್ ರೋಲ್‍ನಲ್ಲಿ ನಟಿಸುತ್ತಿರುವುದು ವಿಶೇಷ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery