ಉದ್ಯಮಿ ದಿ.ಆದಿಕೇಶವುಲು ಮೊಮ್ಮಗ ಗೀತಾವಿಷ್ಣು ಅವರ ಕಾರ್ ಅಪಘಾತ ಪ್ರಕರಣಕ್ಕೆ ದಿನೇ ದಿನೇ ವಿಚಿತ್ರ ತಿರುವು ಸಿಗುತ್ತಿದೆ. ಆರಂಭದಲ್ಲಿ ಅಪಘಾತ ನಡೆದಾಗ ಕಾರ್ನಲ್ಲಿ ಪ್ರಜ್ವಲ್ ದೇವರಾಜ್ ಮತ್ತು ದಿಗಂತ್ ಇದ್ದರು ಎಂದು ಸುದ್ದಿಯಾಗಿತ್ತು. ನಂತರ, ಅವರಿಬ್ಬರೂ ಶೂಟಿಂಗ್ನಲ್ಲಿದ್ದರು. ಬೆಂಗಳೂರಿನಲ್ಲಿ ಇರಲೇ ಇಲ್ಲ ಎಂಬ ಸ್ಪಷ್ಟನೆ ಸಿಕ್ಕಿತ್ತು. ಇತ್ತ, ಗೀತಾವಿಷ್ಣು ಆಸ್ಪತ್ರೆಯಿಂದ ಪರಾರಿಯಾಗಿದ್ದು, ಇನ್ನೂ ಸಿಕ್ಕಿಲ್ಲ. ಹೀಗಿರುವಾಗಲೇ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೇವರಾಜ್ ಅವರ ಇನ್ನೊಬ್ಬ ಪುತ್ರ ಪ್ರಣಮ್ ದೇವರಾಜ್ ಹಾಗೂ ದಿಗಂತ್ಗೆ ಪೊಲೀಸರು ನೊಟೀಸ್ ನೀಡಿದ್ದಾರೆ.
ನೋಟಿಸ್ ಬಂದಿರುವುದು ನಿಜ. ಗೀತಾವಿಷ್ಣು ಹಾಗೂ ಪ್ರಣಮ್ ದೇವರಾಜ್ ಸ್ನೇಹಿತರು. ಅಪಘಾತ ನಡೆದ ನಂತರ ಪ್ರಣಮ್ ಅಪಘಾತ ಸ್ಥಳಕ್ಕೆ ಹೋಗಿದ್ದರು. ಪೊಲೀಸರು ಗೀತಾವಿಷ್ಣು ಅವರನ್ನು ವಶಕ್ಕೆ ತೆಗೆದುಕೊಂಡ ಮೇಲೆ ವಾಪಸ್ ಆಗಿದ್ದರು. ಪೊಲೀಸರ ನೋಟಿಸ್ಗೆ ಉತ್ತರ ನೀಡುತ್ತೇವೆ ಎಂದಿದ್ದಾರೆ ದೇವರಾಜ್.
ದಿಗಂತ್ಗೆ ಇನ್ನೂ ನೋಟಿಸ್ ಸಿಕ್ಕಿಲ್ಲ. ಆದರೆ, ನೋಟಿಸ್ ಕಳಿಸಿರುವುದನ್ನು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.
Related Articles :-
Prem And Vijay Raghavendra Come In Favor Of Prajwal And Diganth