` ಏನೈತಿ..ಅಂಥಾದ್ದೇನೈತಿ..ದಯವಿಟ್ಟು ಗಮನಿಸಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
dayavittu gamanisi image
dayavittu gamanisi

ದಯವಿಟ್ಟು ಗಮನಿಸಿ ಚಿತ್ರದ ಎರಡನೇ ಟೀಸರ್ ರಿಲೀಸ್ ಆಗಿದೆ. ಕುತೂಹಲ ಮೂಡಿಸಿರುವುದು ಎರಡು ಟೀಸರ್​ಗಳ ನಡುವಿನ ವಿಭಿನ್ನತೆ. ಮೊದಲನೇ ಟೀಸರ್​ನಲ್ಲಿ ವಿವಾಹಿತ ಪುರುಷನೊಬ್ಬನನ್ನು ಅಕ್ರಮ ಸಂಬಂಧಕ್ಕೆಳೆಯುವ ದೃಶ್ಯಗಳಿದ್ದವು. ಎರಡನೇ ಟೀಸರ್​ನಲ್ಲಿ ಅದಕ್ಕೆ ಸಂಪೂರ್ಣ ಉಲ್ಟಾ. ಎರಡನೇ ಟೀಸರ್​ನಲ್ಲಿರುವ ಧರ್ಮ ಧರ್ಮಗಳ ನಡುವಣ ವಿಶ್ಲೇಷಣೆ.

ಹಾಗಾದರೆ, ಕಥೆ ಏನಿರಬಹುದು..? ಮೊದಲನೇ ಚಿತ್ರದಲ್ಲಿ ಕೆಲವು *#*# (ಅಂದ್ರೆ ಸೆನ್ಸಾರ್​ ಅಂತಾ ಅರ್ಥ) ಡೈಲಾಗ್​ಗಳಿದ್ದವು. ಎರಡನೇ ಟೀಸರ್​ನಲ್ಲಿ *#*#*# ಅಂತಹ ಡೈಲಾಗುಗಳಿಲ್ಲ. ಆದರೆ, ಮೊದಲನೇ ಟೀಸರ್​ನಲ್ಲಿ ಕಾಮವನ್ನೂ, ಎರಡನೇ ಟೀಸರ್​ನಲ್ಲಿ ಧರ್ಮವನ್ನೂ ಹೇಳಿರುವ ದಯವಿಟ್ಟು ಗಮನಿಸಿ ಚಿತ್ರದ ಕಥೆಯಾದರೂ ಏನು..? 

ಚಿತ್ರ ಸಾಹಿತಿಯಾಗಿದ್ದ ರೋಹಿತ್ ಪದಕಿ ನಿರ್ದೇಶನದ ಮೊದಲ ಚಿತ್ರ ದಯವಿಟ್ಟು ಗಮನಿಸಿ, ಈ ವಿಚಾರದಲ್ಲಿ ಅರ್ಧ ಗೆದ್ದುಬಿಟ್ಟಿದೆ. ಒಂದು ಕುತೂಹಲವನ್ನಂತೂ ಸೃಷ್ಟಿಸಿದೆ. ರಘು ಮುಖರ್ಜಿ, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಲೆ,  ಸಂಗೀತಾ ಭಟ್, ರಾಜೇಶ್ ನಟರಂಗ, ಭಾವನಾ ರಾವ್..ಹೀಗೆ ಪ್ರತಿಭಾನ್ವಿತರ ದಂಡನ್ನೇ ತುಂಬಿಕೊಂಡು ವಿಭಿನ್ನ ಕಥೆಯೊಂದನ್ನು ಹೇಳುವ ಪ್ರಯತ್ನ ಮಾಡಿದ್ದಾರೆ ರೋಹಿತ್ ಪದಕಿ. 

ಸ್ಪೆಷಲ್ ಸಾಂಗ್​ವೊಂದರಲ್ಲಿ ಮೇಘನಾ ರಾಜ್ ಕೂಡಾ ಹೆಜ್ಜೆ ಹಾಕಿದ್ದಾರೆ. ಅನೂಪ್ ಸೀಳಿನ್ ಸಂಗೀತ ಚಿತ್ರದ ಸಸ್ಪೆನ್ಸ್​ಗೆ ತಕ್ಕಂತಿದೆ. ಒಟ್ಟಿನಲ್ಲಿ ಅಕ್ಟೋಬರ್ 20ಕ್ಕೆ ರಿಲೀಸ್ ಆಗಲಿರುವ ಚಿತ್ರ, ರಿಲೀಸ್​ಗೆ ಮುನ್ನ ಪ್ರೇಕ್ಷಕರಲ್ಲಿ ವಿಚಿತ್ರ ಕುತೂಹಲವನ್ನಂತೂ ಮೂಡಿಸಿದೆ.

 

#

The Terrorist Movie Gallery

Kumari 21 Movie Gallery