` ಸಿನಿಮಾ ಟೀಂಗೂ ಬೆನ್ನು ತೋರಿಸಿ ಮರೆಯಾದ ನಾಯಕಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
priyanka malnad missing
Vaira Heroine Priyanka Malnad

ವೈರ. ಈ ಚಿತ್ರದ ನಾಯಕಿ ಪಿಯಾಂಕಾ ಮಲ್ನಾಡ್. ಚಿತ್ರ ರಿಲೀಸ್‍ಗೆ ಸಿದ್ಧವಾಗಿದ್ದು, ಚಿತ್ರದ ಬಿಡುಗಡೆಗೆ ಮುನ್ನ ಪ್ರಚಾರ ಕಾರ್ಯಋದಲ್ಲಿ ಬ್ಯುಸಿಯಾಗಿದೆ ಚಿತ್ರತಂಡ. ಆದರೆ, ಚಿತ್ರದ ನಾಯಕಿಯೇ ನಾಪತ್ತೆ. ಏಕೆ ಹೀಗೆ ಎಂದರೆ ಸಿಕ್ಕಿರುವ ಕಾರಣ, ಒನ್ಸ್ ಎಗೇಯ್ನ್ ಅದೇ ಬೆನ್ನು.

ಚಿತ್ರದಲ್ಲೊಂದು ದೃಶ್ಯದಲ್ಲಿ ನಾಯಕಿ ಬೆನ್ನು ತೋರಿಸುವ ದೃಶ್ಯವಿದೆ. ಅದು ಚಿತ್ರಕ್ಕೆ ಅತ್ಯಂತ ಪ್ರಮುಖವಾದ ದೃಶ್ಯವಾಗಿತ್ತು. ಸಿನಿಮಾದಲ್ಲಿ ನಆನೇ ನಟಿಸಿದ್ದೆ, ಫೋಟೋಶೂಟ್‍ಗೆ ಮಾತ್ರ ಬಾಡಿ ಡಬಲ್ ಬಳಸಲಾಗಿತ್ತು. ಆ ದಿನ ನಾನು ಬರಲು ಸಾಧ್ಯವಾಗಿಲ್ಲದ ಕಾರಣ ಹಾಗೆ ಮಾಡಲಾಗಿತ್ತು ಎಂದೆಲ್ಲ ಹೇಳಿಕೊಂಡಿದ್ದರು ಪ್ರಿಯಾಂಕಾ ಮಲ್ನಾಡ್.

ಆದರೆ, ಯಾವಾಗ ಚಿತ್ರಕ್ಕೆ ಎ ಸರ್ಟಿಫಿಕೇಟ್ ಸಿಕ್ಕು, ಅವರ ಬೆತ್ತಲೆ ಬೆನ್ನು ಸುದ್ದಿಯಾಗಿಬಿಟ್ಟಿತೋ, ಪ್ರಿಯಾಂಕಾ ಮಲ್ನಾಡ್ ಇದ್ದಕ್ಕಿದ್ದಂತೆ ಸಿಟ್ಟಾಗಿಬಿಟ್ಟರು. ಚಿತ್ರತಂಡದ ಮೇಲೇ ಮುನಿಸಿಕೊಂಡುಬಿಟ್ಟರು. ಈಗ ಸಿನಿಮಾ ಪ್ರಚಾರದಿಂದಲೇ ದೂರವುಳಿದುಬಿಟ್ಟಿದ್ದಾರೆ.

ಐಟಂ ಡ್ಯಾನ್ಸ್ ಮಾಡುತ್ತಿದ್ದವರನ್ನು ನಾಯಕಿಯಾಗಿ ಮಾಡಿದೆವು. ಚಿತ್ರತಂಡದವರು ಆಕೆಯನ್ನು ಮನೆಯವರಂತೆ ಗೌರವದಿಂದ ನೊಡಿಕೊಂಡೆವು. ಆದರೆ, ಈಗ ಚಿತ್ರದ ಪ್ರಚಾರಕ್ಕೇ ಬರುತ್ತಿಲ್ಲ. ನಿರ್ಮಾಪಕರಿಗೆ ಈ ರೀತಿ ಚೂರಿ ಹಾಕಬಾರದು ಎಂದಿದ್ದಾರೆ ನಿರ್ದೇಶಕ ನವರಸನ್. ಆದರೆ, ಚಿತ್ರದ ನಾಯಕಿ ಪ್ರಿಯಾಂಕ ಮಲ್ನಾಡ್ ಮಾತ್ರ ಚಿತ್ರದಲ್ಲಿ ಬೆನ್ನು ತೋರಿಸಿ, ಚಿತ್ರ ಬಿಡುಗಡೆಯಾಗುವ ವೇಳೆಗೆ ಚಿತ್ರತಂಡಕ್ಕೂ ಬೆನ್ನು ತೋರಿಸಿ ನಾಪತ್ತೆಯಾಗಿಬಿಟ್ಟಿದ್ದಾರೆ.

Related Articles :-

Navarasan Upset With Priyanka For Not Promoting Vaira

Priyanka Malnad stays out of Vaira Movie Promotions

 

Ayushmanbhava Movie Gallery

Ellidhe Illitanaka Movie Gallery