` ತಾರಕ್ ಜೊತೆ ಬಂದ ದುರ್ಯೋಧನ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
kuruk teaser
Darshan In Kurukshetra

ತಾರಕ್ ಚಿತ್ರ ಚಿತ್ರಮಂದಿರಗಳಲ್ಲಿ ಅದ್ದೂರಿ ಪ್ರವೇಶವಾಗಿದೆ. ಫ್ಯಾಮಿಲಿ ಮತ್ತು ಆಕ್ಷನ್ ಮಿಶ್ರಿತ ಸಿನಿಮಾ ಪ್ರೇಕ್ಷಕರಿಗೂ ಇಷ್ಟವಾಗುತ್ತಿದೆ. ಇದೆಲ್ಲದರ ಜೊತೆ ದರ್ಶನ್​ ಅಭಿಮಾನಿಗಳಿಗೆ ಡಬಲ್ ಧಮಾಕ. ತಾರಕ್ ಜೊತೆ ಅವರಿಗೆ ದುರ್ಯೋಧನನ ದರ್ಶನವೂ ಆಗಿದೆ. ತಾರಕ್ ಚಿತ್ರಕ್ಕೂ ಮುನ್ನ ಚಿತ್ರಮಂದಿರಗಳಲ್ಲಿ ಕುರುಕ್ಷೇತ್ರ ಚಿತ್ರದ ಟೀಸರ್ ಪ್ರದರ್ಶನವಾಗಿವೆ.

ದುರ್ಯೋಧನನ ರಾಜಭವನ ಪ್ರವೇಶ, ದರ್ಶನ್​ರ ಆ ಠೀವಿ, ಹಿನ್ನೆಲೆಯಲ್ಲಿ ಕೇಳಿ ಬರುವ ಸಾರ್ವಭೌಮ ದುರ್ಯೋಧನ ಎಂಬ ಧ್ವನಿ, ದರ್ಶನ್​ ಗಹಗಹಿಸಿ ನಗುವ ಆ ನಗು ಅಭಿಮಾನಿಗಳ ಸಂಭ್ರಮಕ್ಕೆ ಕಿಚ್ಚು ಹಚ್ಚಿರುವುದು ಸುಳ್ಳಲ್ಲ. ತಾರಕ್ ಎಂಜಾಯ್ ಮಾಡುತ್ತಲೇ ಕುರುಕ್ಷೇತ್ರಕ್ಕಾಗಿ ಕಾಯುವಂತೆ ಮಾಡಿದ್ದಾರೆ ದರ್ಶನ್.

Geetha Movie Gallery

Prarambha Teaserpra Launch Gallery