` ರಕ್ಷಿತಾ ಬೇಡಿಕೆ ಈಡೇರಿಸಿದ ದರ್ಶನ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
darshan, rakshitha
Darshan fullfills Rakshith's Request

ನಟಿ ರಕ್ಷಿತಾ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸ್ನೇಹಕ್ಕೆ ದಶಕಗಳ ಇತಿಹಾಸವಿದೆ. ಕನ್ನಡ ಚಿತ್ರರಂಗದ ಸೂಪರ್ ಹಿಟ್ ಜೋಡಿಗಳಲ್ಲಿ ದರ್ಶನ್-ರಕ್ಷಿತಾ ಜೋಡಿ ಕೂಡಾ ಒಂದು. ಆ ಸ್ನೇಹ ಇಂದಿಗೂ ಮಾಸಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮದ ಸ್ಪರ್ಧಿಗಳಲ್ಲಿ ಒಬ್ಬರಾದ ಚನ್ನಪ್ಪ, ನಟ ದರ್ಶನ್ ಅವರ ದೊಡ್ಡ ಅಭಿಮಾನಿ. ಕಾರ್ಯಕ್ರಮದ ವಿನ್ನರ್ ಕೂಡಾ ಇವರೇ. ಆದರೆ, ಚನ್ನಪ್ಪನವರಿಗೆ ದರ್ಶನ್ ಅವರನ್ನು ಒಮ್ಮೆಯಾದರೂ ಭೇಟಿಯಾಗಬೇಕು, ಅವರ ಜೊತೆ ಒಂದು ಫೋಟೋ ತೆಗೆಸಿಕೊಳ್ಳಬೇಕು ಎಂಬ ಆಸೆಯಿತ್ತು. ಆದರೆ, ಅದು ಈಡೇರಿರಲಿಲ್ಲ. 

ಚನ್ನಪ್ಪನವರ ಈ ಕನಸು ರಕ್ಷಿತಾ ಅವರಿಗೆ ಗೊತ್ತಾದ ನಂತರ, ರಕ್ಷಿತಾ ಅವರೇ ದರ್ಶನ್ ಅವರಲ್ಲಿ ಮನವಿ ಮಾಡಿಕೊಂಡರು. ತಮ್ಮ ಫೇಸ್​ಬುಕ್ ಪೇಜ್​ನಲ್ಲಿ 'ಇವರು ಚನ್ನಪ್ಪ 'ಸರಿಗಮಪ ಸೀಸನ್ 11' ಕಾರ್ಯಕ್ರಮದ ವಿನ್ನರ್. ಇವರು ನಿಮ್ಮ (ದರ್ಶನ್) ದೊಡ್ಡ ಅಭಿಮಾನಿಗಳಲ್ಲಿ ಒಬ್ಬರು. ನಿಮ್ಮನ್ನು ಒಮ್ಮೆ ನೋಡುವುದು ಈತನ ದೊಡ್ಡ ಆಸೆಯಾಗಿದೆ. ಪ್ಲೀಸ್ ಇವರನ್ನು ಒಮ್ಮೆ ಭೇಟಿ ಮಾಡಿ'' ಎಂದು ಮನವಿ ಮಾಡಿದ್ದರು.

ರಕ್ಷಿತಾರ ಬೇಡಿಕೆ ಮನ್ನಿಸಿರುವ ದರ್ಶನ್, ಕೆಲವೇ ದಿನಗಳಲ್ಲಿ ಚೆನ್ನಪ್ಪನವರನ್ನು ಭೇಟಿಯಾಗಿದ್ದಾರೆ. ಅಭಿಮಾನಿಯ ಆಸೆಯನ್ನಷ್ಟೇ ಅಲ್ಲ, ಸ್ನೇಹಿತೆಯ ಬೇಡಿಕೆಯನ್ನೂ ಪೂರೈಸಿದ್ದಾರೆ.

I Love You Movie Gallery

Rightbanner02_butterfly_inside

Paddehuli Movie Gallery