` ಸುದೀಪ್​ಗಾಗಿ ಕನ್ನಡ ಕಲಿತ ಜಪಾನ್ ಮಹಿಳೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sudeep's fan learns kannada in japan
Sudeep's Japanese fan

ಜುಂಕೋ. ಈಕೆ ಜಪಾನಿ ಮಹಿಳೆ. ಈಕೆ ಈಗ ಕನ್ನಡ ಕಲಿಯುವ ಹಠ ತೊಟ್ಟಿದ್ದಾರೆ. ಅಲ್ಪ ಸ್ವಲ್ಪ ಕನ್ನಡವನ್ನು ಕಲಿತೂ ಬಿಟ್ಟಿದ್ದಾರೆ. ಹೀಗೆ ಈಕೆ ಕನ್ನಡ ಕಲಿಯಲು ಕಾರಣವೇನು ಗೊತ್ತಾ..? ಕಿಚ್ಚ ಸುದೀಪ್.

ಜುಂಕೋ, ಸುದೀಪ್ ಅವರ ಕಟ್ಟಾ ಅಭಿಮಾನಿ. ಬೆಂಗಳೂರಿಗೆ ಬಂದು ಸುದೀಪ್ ಅವರನ್ನು ಭೇಟಿಯಾಗಿ ಫೋಟೋ ತೆಗೆಸಿಕೊಂಡು ಹೋಗಿರುವ ಈಕೆ, ಈಗ ಕನ್ನಡ ಕಲಿಯಲು ಸ್ಪೀಕಿಂಗ್ ಕನ್ನಡ ಪುಸ್ತಕ ಖರೀದಿಸಿದ್ದಾರೆ. 

IndLangs.com ವೆಬ್​ಸೈಟ್ ಮೂಲಕವೂ ಕನ್ನಡ ಕಲಿಯುವ ಸಾಹಸ ಮಾಡುತ್ತಿದ್ದಾರೆ. IndLangs.com, ಭಾರತದ ಇತರೆ ರಾಜ್ಯಗಳ ಜನರು ಕನ್ನಡ ಕಲಿಯಲು ನೆರವಾಗುವ ಜಾಲತಾಣ. 

ಇಂಗ್ಲಿಷ್ ವ್ಯಾಮೋಹಕ್ಕೆ ಬಿದ್ದ ಕನ್ನಡಿಗರೇ ಕನ್ನಡ ಮರೆಯಲು ಪೈಪೋಟಿ ನಡೆಸುತ್ತಿರುವಾಗ, ಒಪ್ಪ ಜಪಾನ್ ಮಹಿಳೆ ಕನ್ನಡ ಕಲಿಯಲು ಹೊರಟಿರುವುದು ನಿಜಕ್ಕೂ ಅಭಿನಂದನೀಯ.

Related Articles :-

Sudeep's Japanese Fan Is Learning Kannada

Babru Teaser Launch Gallery

Odeya Audio Launch Gallery