` ತಾರಕ್‍ನಲ್ಲಿ ದೇವರಾಜ್ ಅವರೇ ಹೀರೋ - ದರ್ಶನ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
devraj is real hero says darshan
Devaraj, Darshan Image

ತಾರಕ್ ಚಿತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೀರೋ ಆಗಿ ನಟಿಸಿರುವ ಸಿನಿಮಾ. ಆದರೆ, ದರ್ಶನ್ ಹೇಳೋದೇ ಬೇರೆ. ಒಂದ್ಸಲ ಸಿನಿಮಾ ನೋಡಿ. ನಿಮಗೇ ಗೊತ್ತಾಗುತ್ತೆ. ಸಿನಿಮಾದ ರಿಯಲ್ ಹೀರೋ ಡೈನಮಿಕ್ ಸ್ಟಾರ್ ದೇವರಾಜ್ ಅಂತಾರೆ ದರ್ಶನ್.

ದೇವರಾಜ್‍ರಂತ ಹಿರಿಯ ಕಲಾವಿದ 80 ವರ್ಷದ ಅಜ್ಜನ ಪಾತ್ರಕ್ಕೆ ಒಪ್ಪಿಕೊಂಡಿದ್ದೇ ದರ್ಶನ್‍ಗೆ ಖುಷಿ ಕೊಟ್ಟಿದೆ. ತಾತನ ಗೆಟಪ್‍ನಲ್ಲಿ ದೇವರಾಜ್ ಅವರ ನಟನೆ ನೋಡಿದರೆ, ಚಿತ್ರದ ಹೀರೋಗಿರಿಯನ್ನ ದೇವರಾಜ್‍ಗೇ ಕೊಡ್ತಾರೆ ಅನ್ನೋದು ದರ್ಶನ್ ಮಾತು.

ಸ್ವತಃ ಚಿತ್ರದ ನಾಯಕನಾಗಿದ್ದರೂ, ಚಿತ್ರದ ಹಿರಿಯ ಕಲಾವಿದರ ಬಗ್ಗೆ ದರ್ಶನ್ ಆಡಿರುವ ಮಾತುಗಳು, ದರ್ಶನ್ ಅವರ ವ್ಯಕ್ತಿತ್ವವನ್ನು ಎತ್ತಿಹಿಡಿಯುತ್ತಿವೆ. 

Ayushmanbhava Movie Gallery

Ellidhe Illitanaka Movie Gallery