ನೀವು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ್ ಚಿತ್ರದ ಟ್ರೇಲರ್ನ್ನು ನೋಡಿಯೇ ಇರ್ತೀರಿ.ಆ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ್ ಕೂಡಾ ನಾಯಕಿ. ಶಾನ್ವಿ ತೆಲುಗಿನಲ್ಲಿ ಹೇಳೋ ಡೈಲಾಗಿಗೆ, ದರ್ಶನ್, ಏ ದೆವ್ವ, ಕನ್ನಡದಲ್ಲಿ ಮಾತಾಡು ಅನ್ನೋ ಡೈಲಾಗ್ನ್ನೂ ನೋಡಿರ್ತೀರಿ.
ಆದರೆ, ವಿಷಯ ಅದಲ್ಲ. ಈ ಶಾನ್ವಿ ಶ್ರೀವಾಸ್ತವ್ಗೂ ದೆವ್ವಕ್ಕೂ ಇರೋ ಲಿಂಕು. ನಿಮಗೆಲ್ಲ ಗೊತ್ತಿರೋ ಹಾಗೆ, ಶಾನ್ವಿ ಶ್ರೀವಾಸ್ತವ್ ಕನ್ನಡದಲ್ಲಿ ಅಭಿನಯಿಸಿದ ಮೊದಲ ಚಿತ್ರ ಚಂದ್ರಲೇಖ. ಆ ಚಿತ್ರದಲ್ಲಿ ಶಾನ್ವಿ ಮೈಮೇಲೆ ದೆವ್ವ ಬಂದಿತ್ತು. ಚಿತ್ರ ಹಿಟ್ ಆಗಿತ್ತು.
ಆದರೆ, ಈ ಸುಂದರಿಗೆ ದೆವ್ವ ಮೈಮೇಲೆ ಬರೋದು ಅಲ್ಲಿಗೇ ನಿಲ್ಲಲಿಲ್ಲ. ಯಶ್ ಜೊತೆ ನಟಿಸಿದ್ದ ಮಾಸ್ಟರ್ಪೀಸ್ನಲ್ಲೂ ಅದು ಕಂಟಿನ್ಯೂ ಆಯ್ತು. ದೆವ್ವ ಇಷ್ಟು ಬ್ಯೂಟಿಫುಲ್ಲಾಗಿರುತ್ತಾ ಅಂತಾ ಹೊಟ್ಟೆ ಉರಿದುಕೊಳ್ಳುವಷ್ಟು ಚೆನ್ನಾಗಿ ದೆವ್ವದ ವೇಷದಲ್ಲಿ ಕಾಣಿಸಿಕೊಂಡಿದ್ದರು ಶಾನ್ವಿ. ಆ ಚಿತ್ರವೂ ಸೂಪರ್ ಹಿಟ್.
ಈಗ, ಚಿತ್ರರಂಗದ ಬಹು ನಿರೀಕ್ಷಿತ ಚಿತ್ರ ತಾರಕ್ ತೆರೆ ಕಾಣುತ್ತಿದೆ. ಒನ್ಸ್ ಎಗೇಯ್ನ್ ದೆವ್ವವಾಗಿದ್ದಾರೆ ಶಾನ್ವಿ. ದೆವ್ವದ ಹುಡುಗಿ ಅಂತಾನೇ ಬ್ರಾಂಡೂ ಆಗಿಬಿಟ್ಟಿದ್ದಾರೆ. ಇಷ್ಟೆಲ್ಲ ಕೇಳಿದ ಮೇಲೆ ನಮ್ಮ ಮನಸ್ಸಲ್ಲಿ ಮೂಡೋ ಒಂದೇ ಒಂದು ಪ್ರಶ್ನೆ..ಶಾನ್ವಿಗೇ ಏಕೆ ಪದೇ ಪದೇ ದೆವ್ವ ಹಿಡಿಯುತ್ತೆ..? ಉತ್ತರಕ್ಕಾಗಿ ತಾರಕ್ ನೋಡಿ.