` ಸೈಲೆಂಟ್ ಸುನಾಮಿಯಾಗುತ್ತಿದೆ ತಾರಕ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
tarak is silent movie
Tarak Movie Image

ತಾರಕ್ ಸಿನಿಮಾ ಆರಂಭದಿಂದಲೂ ದರ್ಶನ್ ಸ್ಟೈಲ್​ನಿಂದ ಹೊರತಾಗಿಯೇ ಇತ್ತು. ತಾರಕ್ ಸಿನಿಮಾ ದರ್ಶನ್ ಚಿತ್ರಗಳ ಹಲವು ಮಿಥ್​ಗಳನ್ನು ಸುಳ್ಳು ಮಾಡಿದ ಚಿತ್ರವೂ ಹೌದು. ದರ್ಶನ್ ಸಿನಿಮಾ ಶೂಟಿಂಗ್ ನಡೆದು ರಿಲೀಸಾಗೋಕೆ ವರ್ಷ ಬೇಕು ಅನ್ನೋದನ್ನೂ ಸುಳ್ಳು ಮಾಡಿದ ಚಿತ್ರ ತಾರಕ್. ಅದರ ಬಗ್ಗೆ ದರ್ಶನ್ ತುಂಬಾ ಖುಷಿಯಿಂದ ಹೇಳಿಕೊಂಡಿದ್ದರು. ಈಗ ಚಿತ್ರದ ಟ್ರೇಲರ್ ರಿಲೀಸಾಗಿ, ಚಿತ್ರಮಂದಿರಕ್ಕೆ ನುಗ್ಗಲು ರೆಡಿಯಾಗುತ್ತಿದೆ.

ಇಲ್ಲಿಯೂ ದರ್ಶನ್ ಚಿತ್ರ ಹೊಸ ದಾಖಲೆ ಬರೆಯುತ್ತಿದೆ. ಸಾಮಾನ್ಯವಾಗಿ ದರ್ಶನ್ ಚಿತ್ರ ಎಂದರೆ, ಬಿರುಗಾಳಿಯಂತೆ ಬಂದು, ಅಪ್ಪಳಿಸುವುದು ಈ ಹಿಂದಿನ ಇತಿಹಾಸ. ಆದರೆ, ತಾರಕ್​ನಲ್ಲಿ ಹಾಗಾಗಿಲ್ಲ. ಸಿನಿಮಾದ ಟ್ರೇಲರ್ ನೋಡಿದ ಗಾಂಧಿನಗರದ ಮಂದಿಯೇ ಇದು ಸೈಲೆಂಟ್ ಸುನಾಮಿ ಎನ್ನುತ್ತಿದ್ದಾರೆ.

ದರ್ಶನ್ ಅವರ ಎಂದಿನ ಶೈಲಿಯಿಂದ ಹೊರಗಿರುವಂತೆ ಕಾಣುವ ತಾರಕ್, ಹಿಟ್ ಆಗುವುದು ಗ್ಯಾರಂಟಿ ಎನ್ನುವುದು ಗಾಂಧಿನಗರದವರೇ ಹೇಳುತ್ತಿರುವ ಮಾತು. ದರ್ಶನ್​ರಂತಹ ಕಲಾವಿದರಿಗೆ ಇತ್ತೀಚೆಗೆ ಗಟ್ಟಿಯಾದ ಕಥೆಯೊಂದು ಮಿಸ್ ಆಗುತ್ತಿತ್ತು. ಅದು ತಾರಕ್​ನಲ್ಲಿ ಸಿಕ್ಕಿದೆ. ಇದು ಬಿರುಗಾಳಿಯಂತೆ ಬರಲ್ಲ. ಚಂಡಮಾರುತದಂತೆ ಅಪ್ಪಳಿಸಿ ಹೋಗಲ್ಲ. ಸೈಲೆಂಟ್ ಸುನಾಮಿಯಾಗಿ ಹೊಸ ಅಲೆಯೆಬ್ಬಿಸುವುದು ಗ್ಯಾರಂಟಿ ಎಂದು ಗಾಂಧಿನಗರದ ಚಿತ್ರಪಂಡಿತರು ಭವಿಷ್ಯ ನುಡಿದಿದ್ದಾರೆ.

ಅಭಿಮಾನಿಗಳಿಗೆ ಇಷ್ಟವಾಗುವಂತಹ, ಫ್ಯಾಮಿಲಿಯವರು ಮೆಚ್ಚುವಂತಹ, ಹುಡುಗಿಯರು ಪ್ರೀತಿಸುವಂತಹ ದರ್ಶನ್ ತಾರಕ್​ನಲ್ಲಿದ್ದಾರೆ. ಹೀಗಾಗಿ ಅಭಿಮಾನಿಗಳು ಹೇಳ್ತಿರೋದು ಒಂದೇ ಮಾತು..ನೋ ಡಿಸ್ಕಷನ್..ಓನ್ಲಿ ಆಕ್ಷನ್. ಮಾತು ಬಿಡಿ..ಸಿನಿಮಾ ನೋಡಿ.

Mugilpete Shooting Pressmeet In Sakleshpura

Odeya Audio Launch Gallery