ತಾರಕ್. ಚಾಲೆಂಜಿಂಗ್ ಸ್ಟಾರ್ ಅಭಿನಯದ ತಾರಕ್ ಟ್ರೇಲರ್ ಲೇಟಾಗಿ ಬಂದರೂ ಲೇಟೆಸ್ಟಾಗಿ ಬಂದಿದೆ. ಮಿಲನ ಪ್ರಕಾಶ್ ನಿರ್ದೇಶನದ ಚಿತ್ರದಲ್ಲಿ ಅಭಿಮಾನಿಗಳಿಗೆ ಶಿಳ್ಳೆ ಹೊಡೆಯೋ ಡೈಲಾಗ್ಗಳೂ ಇವೆ. ಫ್ಯಾಮಿಲಿಯನ್ನು ಸೆಳೆಯುವ ಕುತೂಹಲವೂ ಇದೆ. ಒಂದು ತರಲೆ ತುಂಟತನದ ಪ್ರೇಮಕಥೆಯೂ ಇದೆ.
ಟ್ರೇಲರ್ ನೋಡಿದರೆ, ಚಿತ್ರದಲ್ಲಿ ದರ್ಶನ್ ಮತ್ತು ದೇವರಾಜ್, ಮೊಮ್ಮಗ ಮತ್ತು ತಾತನಾಗಿ ನಟಿಸಿದ್ದರೂ ಎದುರಾಬದುರಾಗಿ ಮುಖಾಮುಖಿಯಾಗುವ ಸೂಚನೆಗಳಿವೆ. ಉಸಿರಾಡುವ ಗಾಳಿ ಎಲ್ಲಿಯದೇ ಆದರೂ ಮೈಯ್ಯಲ್ಲಿ ಹರೀತಾ ಇರೋದು ಕನ್ನಡದ ರಕ್ತಾನೇ ಅನ್ನೋ ಡೈಲಾಗ್.. ಮಾತೆಲ್ಲ ಇಲ್ಲ..ಆಕ್ಷನ್ ಮಾತ್ರ ಅನ್ನೋ ಡೈಲಾಗು ಅಭಿಮಾನಿಗಳ ಚಪ್ಪಾಳೆ, ಶಿಳ್ಳೆ ಎರಡನ್ನೂ ಗಿಟ್ಟಿಸಿಕೊಳ್ಳುತ್ತೆ.
ಶೃತಿ ಹರಿಹರನ್ ಮತ್ತು ಶಾನ್ವಿ ಶ್ರೀವಾಸ್ತವ್ ಜೊತೆಗಿನ ತುಂಟಾದ ಝಲಕ್ ಕೂಡಾ ಚಿತ್ರದಲ್ಲಿದೆ. ಒನ್ಸ್ ಎಗೇಯ್ನ್ ಇಲ್ಲಿಯೂ ಶಾನ್ವಿ ಒಂದ್ಸಲ ದೆವ್ವವಾಗಿರುವ ಹಾಗಿದೆ. ಇಡೀ ಟ್ರೇಲರ್ನಲ್ಲಿ ಎದ್ದು ಕಾಣೋದು ದರ್ಶನ್ ಫ್ರೆಶ್ನೆಸ್. ದರ್ಶನ್ ಈ ಚಿತ್ರದಲ್ಲಿ ಅಭಿಮಾನಿಗಳಿಗೆ ಡಿಫರೆಂಟಾಗಿ ಕಾಣಿಸ್ತಾರೆ.
ನಿರ್ಮಾಪಕ ದುಶ್ಯಂತ್ ನಿರ್ಮಾಣದ ಚಿತ್ರ, ತಡೆದ ಮಳೆ ಜಡಿದು ಬಂತು ಎನ್ನುವ ಗಾದೆಗೆ ತಕ್ಕ ಹಾಗಿದೆ.