Print 
pooja gandhi, pawan gandhi,

User Rating: 0 / 5

Star inactiveStar inactiveStar inactiveStar inactiveStar inactive
 
pooja gandhi and her father seperated
Pooja Gandhi, Pawan Gandhi Image

ನಟಿ ಪೂಜಾಗಾಂಧಿ ಅವರ ತಂದೆ ಪವನ್ ಗಾಂಧಿ ಅವರ ವಿರುದ್ಧ ಚೆಕ್​ಬೌನ್ಸ್ ಕೇಸ್ ದಾಖಲಾಗಿದೆ. ಆದೀಶ್ವರ್​ನಲ್ಲಿ ಸುಮಾರು 8 ಲಕ್ಷ ರೂ. ವಸ್ತುಗಳನ್ನು ಖರೀದಿಸಿ ಚೆಕ್ ಕೊಟ್ಟು, ಅದು ಬೌನ್ಸ್ ಆಗಿರುವುದೇ ಅಲ್ಲದೆ, ಅರೆಸ್ಟ್ ವಾರೆಂಟ್ ಕೂಡಾ ಜಾರಿಯಾಗಿದೆ. 

ಪೂಜಾ ಗಾಂಧಿ ಅವರ ತಂದೆ ಎಂಬ ಕಾರಣಕ್ಕಾಗಿ ಏನಿದು ಪೂಜಾ ಎಂದು ಅವರನ್ನು ಚಿತ್ರಲೋಕ ಮಾತನಾಡಿಸಿದಾಗ ತಿಳಿದು ಬಂದಿದ್ದು ಇಷ್ಟು. ಅದನ್ನು ಪೂಜಾ ಅವರ ಮಾತಿನಲ್ಲೇ ಕೇಳಿ.

ನನಗೂ ನನ್ನ ತಂದೆಗೂ ಸಂಬಂಧವಿಲ್ಲ. ಸುಮಾರು ತಿಂಗಳಿಂದ ಅವರು ನಾವು ಬೇರೆ ಬೇರೆ ಇದ್ದೇವೆ. ನಮ್ಮ ತಾಯಿ ಹಾಗೂ ನಮ್ಮ ತಂದೆ ವಿಚ್ಚೇಧನಕ್ಕೆ ಮುಂದಾಗಿದ್ದು, ಕಾನೂನು ಪ್ರಕ್ರಿಯೆ ನಡೆಯುತ್ತಿದೆ. ಹೀಗಾಗಿ ನನ್ನ ತಂದೆ ಮಾಡಿಕೊಂಡ ಏನೇ ವ್ಯವಹಾರಗಳಿಗೂ ನಾವು ಹೊಣೆಯಲ್ಲ. ನಾನು ನನ್ನ ತಾಯಿ ಜ್ಯೋತಿ, ತಂಗಿಯರಾದ ರಾಧಿಕಾ ಹಾಗೂ ಸಹಾನಿ ಜೊತೆಯಲ್ಲಿದ್ದೇವೆ. ತಂದೆಯಿಂದ ದೂರವಾಗಿದ್ದೇವೆ. 

ಇದು ಪೂಜಾ ಅವರ ಮಾತು. ಇನ್ನು ಮುಂದೆ ನನ್ನ ಹೆಸರನ್ನು ಬಳಸಿಕೊಂಡು ಅವರು ಯಾವುದೇ ಹಣಕಾಸಿನ ವ್ಯವಹಾರ ಮಾಡಿದರೂ, ಅದಕ್ಕೂ ನನಗೂ ಸಂಬಂಧವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಪೂಜಾಗಾಂಧಿ.

Related Articles :-

ಪೂಜಾ ಗಾಂಧಿ ತಂದೆ ವಿರುದ್ಧ ಅರೆಸ್ಟ್ ವಾರೆಂಟ್