Print 
priyanka malnad vaira,

User Rating: 5 / 5

Star activeStar activeStar activeStar activeStar active
 
vaira goes bold with body double
Priyanka Malnad

ನೀವು ವೈರ ಚಿತ್ರದ ಪೋಸ್ಟರ್‍ಗಳನ್ನು, ಟೀಸರ್‍ನ್ನು ನೋಡಿದ್ದೀರಿ. ಅದರಲ್ಲೂ ಪೋಸ್ಟರ್‍ಗಳಲ್ಲಿ ಯುವತಿಯೊಬ್ಬರ ಅರೆಬೆತ್ತಲೆ ಬೆನ್ನು ನೋಡಿಯೇ ಇರುತ್ತೀರಿ. ಅದು ಚಿತ್ರದ ನಾಯಕಿ ಪ್ರಿಯಾಂಕಾ ಮಲ್ನಾಡ್ ಎಂದುಕೊಂಡಿದ್ದೀರಾ..? ಅದು ಅವರಲ್ಲ. 

ನೀವು ಬಾಡಿ ಡಬಲ್ ಎಂಬ ಪದವನ್ನು ಕೇಳಿದ್ದರೆ, ಅದು ಅರ್ಥವಾಗುತ್ತೆ. ಕಲಾವಿದರು ನಟಿಸಲು ಮುಜುಗರ ಪಡುವಂತಹ, ಅಸಾಧ್ಯವಾದ ದೃಶ್ಯಗಳಲ್ಲಿ ಈ ರೀತಿ ಬಾಡಿ ಡಬಲ್ ಬಳಸುತ್ತಾರೆ. ನಿಮಗೆ ಈಗಾಗಲೇ ಗೊತ್ತಿರುವ ಭಾಷೆಯಲ್ಲಿ ಹೇಳುವುದಾದದರೆ, ಡ್ಯೂಪ್ ಬಳಸ್ತಾರೆ ಅಷ್ಟೆ. ಇಲ್ಲಿಯೂ ಆಗಿರುವುದು ಇಷ್ಟೆ.

ಸಿನಿಮಾದಲ್ಲಿ ಈ ದೃಶ್ಯ, ಚಿತ್ರದ ಟರ್ನಿಂಗ್ ಪಾಯಿಂಟ್ ಅಂತೆ. ಸಿನಿಮಾದಲ್ಲಿ ಈ ದೃಶ್ಯದಲ್ಲಿ ಸ್ವತಃ ಪ್ರಿಯಾಂಕಾ ಅವರೇ ನಟಿಸಿದ್ದಾರೆ. ಆದರೆ, ಫೋಟೋಶೂಟ್ ವೇಳೆ ಮಾತ್ರ ಅದು ಸಾಧ್ಯವಾಗಿಲ್ಲ. ಹಾಗಾಗಿ ಫೋಟೋಗಳಲ್ಲಿ ಬಾಡಿ ಡಬಲ್ ಬಳಸಿದ್ದಾರೆ. 

ಈ ಹಿಂದೆ ರಾಕ್ಸಸಿ ಎಂಬ ಹಾರರ್ ಸಿನಿಮಾ ಮಾಡಿದ್ದ ನವರಸನ್, ಈ ಬಾರಿ ಥ್ರಿಲ್ಲರ್ ಕಥೆ ಕೈಗೆತ್ತಿಕೊಂಡಿದ್ದಾರೆ. ಚಿತ್ರಕ್ಕೆ ಸೆನ್ಸಾರ್‍ನವರು ಎ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಆದರೆ, ಅದರ ಬಗ್ಗೆ ಅಸಮಾಧಾನವಿದ್ದರೂ, ಅದನ್ನು ಪ್ರಶ್ನಿಸಿ ಮತ್ತಷ್ಟು ದಿನ ಕಾಯುವ ತಾಳ್ಮೆ ಮತ್ತು ಶಕ್ತಿ ಎರಡೂ ಇಲ್ಲದ ಕಾರಣ, ಅದೇ ಸರ್ಟಿಫಿಕೇಟ್ ತೆಗೆದುಕೊಂಡು ಬಂದಿದ್ದಾರಂತೆ. ಚಿತ್ರ ಮುಂದಿನ ತಿಂಗಳು ತೆರೆ ಕಾಣುತ್ತಿದೆ.