` ಯೂರೋಪ್‍ನ 20 ಸ್ಥಳಗಳಲ್ಲಿ ತಾರಕ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
tarak shooting details
Tarak Movie Image

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಹೀಗಿರುವಾಗಲೇ ಚಿತ್ರದ ಒಂದೊಂದೇ ಕುತೂಹಲಕಾರಿ ಸ್ವಾರಸ್ಯಕರ ಮಾಹಿತಿಗಳು ಹೊರಗೆ ಬರುತ್ತಿವೆ. ಚಿತ್ರದ ಶೇ.25ರಷ್ಟು ಶೂಟಿಂಗ್ ಆಗಿರುವುದು ಯೂರೋಪ್‍ನಲ್ಲಿ.ಹೀಗಾಗಿ ಚಿತ್ರದ ಚಿತ್ರೀಕರಣ ಇಟಲಿ, ಸ್ವಿಟ್ಜರ್ಲೆಂಡ್ ಸೇರಿದಂತೆ ಒಟ್ಟು 20 ಸ್ಥಳಗಳಲ್ಲಿ ಶೂಟಿಂಗ್ ನಡೆಸಲಾಗಿದೆ.

ವಿದೇಶದಲ್ಲಿ 20 ದಿನ ನಿರಂತರ ಶೂಟಿಂಗ್ ನಡೆದಿದ್ದು, ಅದಕ್ಕಾಗಿ ಮೂರೂವರೆ ಸಾವಿರ ಕಿ.ಮೀ. ಸುತ್ತಾಡಿದೆಯಂತೆ ಚಿತ್ರತಂಡ. ಚಿತ್ರದ ನಾಯಕ ದರ್ಶನ್ ವಿದೇಶದಲ್ಲೇ ಇರುತ್ತಾನೆ. ಅಲ್ಲಿಯೇ ಹುಟ್ಟಿ ಬೆಳೆದಿರುತ್ತಾನೆ. ಆತ ತಾಯ್ನಾಡಿಗೆ ಬರುವುದು ಏಕೆ..? ವಾಪಸ್ ಹೋಗುವುದು ಏಕೆ ಎನ್ನುವುದೇ ಚಿತ್ರದ ಕಥೆ. ದೇವರಾಜ್‍ಗೆ ಚಿತ್ರದಲ್ಲಿ ದರ್ಶನ್ ಅವರ ತಾತನ ಪಾತ್ರವಿದೆ. 

Chemistry Of Kariyappa Movie Gallery

BellBottom Movie Gallery