Print 
tarak,

User Rating: 5 / 5

Star activeStar activeStar activeStar activeStar active
 
no movie release this week
Tarak Movie Image

ಅತ್ಯಂತ ಪ್ರಮುಖ ನಾಯಕರು ಬರುವಾಗ ಟ್ರಾಫಿಕ್‍ನ್ನು ಝೀರೋ ಮಾಡ್ತಾರೆ. ಸದ್ಯಕ್ಕೆ ಕನ್ನಡದಲ್ಲಿ ತಾರಕ್ ಬರುವ ಮುನ್ನ ಅಂಥದ್ಧೇ ಝೀರೋ ಟ್ರಾಫಿಕ್ ಕ್ರಿಯೇಟ್ ಆಗಿದೆ. ದರ್ಶನ್ ಅಭಿನಯದ ತಾರಕ್ ರಿಲೀಸ್ ಆಗುತ್ತಿರುವುದು ಮುಂದಿನ ವಾರ. ಆದರೆ, ದರ್ಶನ್ ಅಭಿನಯದ ತಾರಕ್ ರಿಲೀಸ್ ಆಗುವ ಹಿಂದಿನ ವಾರವೇ ಯಾವುದೇ ಚಿತ್ರ ರಿಲೀಸ್ ಆಗುತ್ತಿಲ್ಲ. ಅಷ್ಟೆ ಅಲ್ಲ, ತಾರಕ್ ಜೊತೆ ಬೇರೆ ಯಾವ ದೊಡ್ಡ ಚಿತ್ರವೂ ಬರುತ್ತಿಲ್ಲ. 

ಸೆಪ್ಟೆಂಬರ್ 29ಕ್ಕೆ ದರ್ಶನ್ ಅಭಿನಯದ ತಾರಕ್ ಬಿಡುಗಡೆಯಾಗುತ್ತಿದೆ. ಅದೂ ಹೆಚ್ಚೂ ಕಡಿಮೆ 300 ಚಿತ್ರಮಂದಿರಗಳಲ್ಲಿ. ದೊಡ್ಡ ಸ್ಟಾರ್ ಚಿತ್ರದ ಎದುರು ಬಂದರೆ ಕಷ್ಟ ಎನ್ನುವುದು ಒಂದು ಕಾರಣವಾದರೆ, ಕರ್ನಾಟಕದಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ದರ್ಶನ್ ಚಿತ್ರದ ಎದುರು ರಿಸ್ಕ್ ಯಾಕೆ ಎನ್ನುವುದು ಇನ್ನೊಂದು ಕಾರಣ. ಅಲ್ಲದೆ ಇದು ಮಿಲನ ಪ್ರಕಾಶ್ ನಿರ್ದೇಶನದ ಚಿತ್ರ. ಗಟ್ಟಿಯಾದ ಕಥೆ ಇದ್ದೇ ಇರುತ್ತೆ. ದರ್ಶನ್ ಮಾಸ್ ಮತ್ತು ಒಳ್ಳೆಯ ಕಥೆ ಇದ್ದರೆ, ದರ್ಶನ್ ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿಯೇ ಈ ವಾರ ಯಾವುದೇ ಕನ್ನಡ ಸಿನಿಮಾ ರಿಲೀಸ್ ಆಗುತ್ತಿಲ್ಲ.