Print 
darshan, vinood prabhakar,

User Rating: 5 / 5

Star activeStar activeStar activeStar activeStar active
 
darshan supports vinod prabhakar
Vinod Prabhakar, Darshan Image

ಮರಿ ಟೈಗರ್ ಎಂದೇ ಖ್ಯಾತರಾಗಿರುವ ವಿನೋದ್ ಪ್ರಭಾಕರ್ ಅಭಿನಯದ ಕ್ರ್ಯಾಕ್ ಚಿತ್ರ ಬಿಡುಗಡೆಯಾಗಿದೆ. ಅಭಿಮಾನಿಗಳಿಗೂ ಇಷ್ಟವಾಗಿದೆ. ಹಾಗೆಯೇ ಚಿತ್ರ ದಾಸ ದರ್ಶನ್‍ಗೂ ಇಷ್ಟವಾಗಿಬಿಟ್ಟಿದೆ. ಕುರುಕ್ಷೇತ್ರ ಚಿತ್ರದ ಶೂಟಿಂಗ್, ತಾರಕ್ ಬಿಡುಗಡೆ ಟೆನ್ಷನ್ ಮಧ್ಯೆಯೂ ಚಿತ್ರವನ್ನು ಬಿಡುವು ಮಾಡಿಕೊಂಡು ನೋಡಿರುವ ದರ್ಶನ್, ಗೆಳೆಯನ ಬೆನ್ನು ತಟ್ಟಿದ್ದಾರೆ.

ಪೊಲೀಸ್ ಪಾತ್ರವನ್ನು ನಾನೂ ಮಾಡಿದ್ದೇನೆ. ಇನ್ನೂ ಹಲವರು ಮಾಡಿದ್ದಾರೆ. ಆದರೆ, ಅದಕ್ಕೊಂದು ಕಾಮಿಡಿ ಟಚ್ ಕೊಟ್ಟು ನಟಿಸಿರುವ ವಿನೋದ್, ಅವರ ಸ್ಟೈಲ್, ಡೈಲಾಗ್ ಎಲ್ಲವೂ ಸ್ಪೆಷಲ್ ಎಂದಿದ್ದಾರೆ ದರ್ಶನ್.

ದರ್ಶನ್‍ಗೆ ತುಂಬಾ ಇಷ್ಟವಾಗಿರುವುದು ಚಿತ್ರದ ಕ್ಲೈಮಾಕ್ಸ್. ಎಲ್ಲೂ ಬೋರ್ ಹೊಡೆಸದ ಕಥೆ, ಕ್ಲೈಮಾಕ್ಸ್‍ನಲ್ಲಿ ಬೇರೆಯೇ ಫೀಲ್ ಕೊಡುತ್ತೆ. ಫೈಟ್ಸ್ ಅಂತೂ ವಂಡರ್‍ಫುಲ್. ನಿರ್ದೇಶಕರ ಶ್ರಮವೂ ಎದ್ದು ಕಾಣುತ್ತೆ. ಟೈಗರ್ ಪ್ರಭಾಕರ್ ಮಗನ ಚಿತ್ರವನ್ನು ನೋಡಿ, ಅಭಿಮಾನಿಗಳು ಗೆಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ ದರ್ಶನ್.

ಸಮಕಾಲೀನ ಕಲಾವಿದನ ಚಿತ್ರದ ಬಗ್ಗೆ ಸ್ಟಾರ್ ನಟನೊಬ್ಬ ಈ ರೀತಿ ನಡೆದುಕೊಳ್ಳುವುದು ಅಭಿಮಾನಿಗಳಿಗೆ ಖುಷಿ ಕೊಡುವುದು ನಿಜ. ಹಾಗಾಗಿಯೇ ದರ್ಶನ್ ಗ್ರೇಟ್ ಎನಿಸಿಬಿಡ್ತಾರೆ.