ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬಕ್ಕೆ ಈ ವರ್ಷದ ವಿಶೇಷ ಪ್ರಜಾಕೀಯ ಅಲ್ಲ..'ಉತ್ತಮ ಪ್ರಜಾ ಪಾರ್ಟಿ'ಯೂ ಅಲ್ಲ. ಅದು ನಮ್ಮ ಉಪ್ಪಿ, ಹತ್ತಿರದವರು ಕಂಡಂತೆ ಎಂಬ ಪುಸ್ತಕ.
ಉಪೇಂದ್ರ ಅವರ ಈ ವರ್ಷದ ಹುಟ್ಟುಹಬ್ಬಕ್ಕೆ ಒಂದು ವಿಶೇಷವಾದ ಪುಸ್ತಕ ಕೂಡ ಬರುತ್ತಿದ್ದು, ಅದನ್ನು ಹುಟ್ಟುಹಬ್ಬಕ್ಕಾಗಿಯೇ ವಿಶೇಷವಾಗಿ ಬರೆಯಲಅಗಿದೆ. ಈ ಪುಸ್ತಕದಲ್ಲಿ ಉಪೇಂದ್ರ ಅವರ ಆಪ್ತರು, ತಾವು ಕಂಡ ಉಪ್ಪಿಯ ಬಗ್ಗೆ ಬರೆದಿದ್ದಾರೆ. ಉಪೇಂದ್ರ ತಂದೆ, ತಾಯಿ, ಅಣ್ಣನಿಂದ ಹಿಡಿದು ಅವರ ಆಪ್ತ ವಲಯದ ಹಲವು ಮಿತ್ರರು, ಈ ಪುಸ್ತಕದಲ್ಲಿ ತಾವು ಕಂಡ ಉಪ್ಪಿಯನ್ನು ಅಕ್ಷರರೂಪಕ್ಕೆ ಇಳಿಸಿದ್ದಾರೆ.
ಉಪ್ಪಿ ಜೀವನದ ಹಲವು ವಿಶೇಷ ಸಂಗತಿಗಳೂ ಕೂಡಾ ಪುಸ್ತಕದಲ್ಲಿವೆ. ಉಪೇಂದ್ರ ಹುಟ್ಟುಹಬ್ಬಕ್ಕೆಂದೇ ಸಿದ್ಧವಾಗಿದ್ದರೂ, ಈ ಪುಸ್ತಕ ಮಾರುಕಟ್ಟೆಯಲ್ಲಿ ಸಿಗುವುದು ಒಂದು ವಾರದ ನಂತರ. ಉಪೇಂದ್ರ ಅವರ ಬಗ್ಗೆ ಕುತೂಹಲ ಇರುವವರು, ಅಭಿಮಾನಿಗಳು ಪುಸ್ತಕಕ್ಕಾಗಿ ಎದುರು ನೋಡುತ್ತಿದ್ದಾರೆ.