ಕೆ.ಎ. ಸುರೇಶ್ ನಿರ್ಮಾಣದ 'ರಾಜು ಕನ್ನಡ ಮೀಡಿಯಂ' ಚಿತ್ರ, ಭರ್ಜರಿ ಸದ್ದು ಮಾಡುತ್ತಿದೆ. ಟೀಸರ್ ಬಿಡುಗಡೆಯ ನಂತರವಂತೂ ಡಿಮ್ಯಾಂಡ್ ಸಿಕ್ಕಾಪಟ್ಟೆ ಜಾಸ್ತಿಯಾಗಿದೆಯಂತೆ. ಅದರಲ್ಲೂ ಸುರೇಶ್ ಥ್ರಿಲ್ಲಾಗೋಕೆ ಕಾರಣ, ವಿದೇಶಗಳಲ್ಲಿ ಸೃಷ್ಟಿಯಾಗಿರುವ ಕ್ರೇಜ್. ಚಿತ್ರವನ್ನು ವಿದೇಶಗಳಲ್ಲಿ ವಿತರಣೆ ಮಾಡಲು ವಿತರಕರು ಬೆನ್ನು ಬಿದ್ದಿದ್ದಾರಂತೆ. ಕಾರಣವೇನೆಂದು ಹುಡುಕಿದರೆ ಸಿಕ್ಕಿರುವ ಉತ್ತರ ಕಿಚ್ಚ ಸುದೀಪ್.
ಚಿತ್ರದ ಟೀಸರ್ ಬಾಲಿವುಡ್ ಲೆವೆಲ್ಲಿನಲ್ಲಿದೆ. 'ಫಸ್ಟ್ ರ‍್ಯಾಂಕ್ ರಾಜು' ಖ್ಯಾತಿಯ ಗುರುನಂದನ್, ರಾಜು ಪಾತ್ರ ನಿಭಾಯಿಸಿದ್ದಾರೆ. ರಂಗಿತರಂಗ ಖ್ಯಾತಿಯ ಅವಂತಿಕಾ ಶೆಟ್ಟಿ ನಾಯಕಿ. ಇವರ ಜೊತೆ ಆಶಿಕ ರಂಗನಾಥ್ ಹಾಗೂ ಅಂಜೇಲಿನ ಕೂಡಾ ನಾಯಕಿಯರಾಗಿ ನಟಿಸಿದ್ದಾರೆ. ಸಾಧು ಕೋಕಿಲ, ಕುರಿ ಪ್ರತಾಪ್, ಚಿಕ್ಕಣ್ಣ, ಸುಚಿಂದ್ರ ಪ್ರಸಾದ್, ಬಿಗ್ ಬಾಸ್ ಖ್ಯಾತಿಯ ಪ್ರಥಮ್, ಕಿರಿಕ್ ಕೀರ್ತಿ, ನಿರ್ದೇಶಕರಾದ ಓಂ ಪ್ರಕಾಶ್ ರಾವ್, ಇಂದ್ರಜಿತ್ ಲಂಕೇಶ್.. ಹೀಗೆ ಅದ್ಧೂರಿ ತಾರಾಗಣದ ಚಿತ್ರ, ರಿಲೀಸ್ ಆಗೋಕೆ ರೆಡಿಯಾಗಿದೆ.