ಚಿತ್ರನಟಿ ಅಮೂಲ್ಯ ಮದುವೆಯಾದ ನಂತರ ಮೊದಲ ಹುಟ್ಟುಹಬ್ಬ ಆಚರಿಸಿದ್ದು ಸೆಪ್ಟೆಂಬರ್ 14ರಂದು. ಎಂದಿನಂತೆ ಅಭಿಮಾನಿಗಳು, ಮನೆಯವರು ಅಮೂಲ್ಯಗೆ ಶುಭ ಹಾರೈಸಿದ್ರು. ಆದರೆ, ಅಮೂಲ್ಯರನ್ನು ಮರ್ಸಿಡಿಸ್ ಮಹಾರಾಣಿಯನ್ನಾಗಿಸಿದ್ದು ಅಮೂಲ್ಯ ಅವರ ಪ್ರೀತಿಯ ಪತಿ ಜಗದೀಶ್.
ಹುಟ್ಟುಹಬ್ಬದ ವಿಶೇಷವಾಗಿ ಜಗದೀಶ್, ಪ್ರೀತಿಯ ಪತ್ನಿ ಅಮೂಲ್ಯಗೆ ಮರ್ಸಿಡಿಸ್ ಬೆಂಜ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಬಿಳಿ ಬಣ್ಣದ ಮರ್ಸಿಡಿಸ್ ಬೆಂಜ್ ಡ್ರೈವ್ ಮಾಡಿದ ಗೋಲ್ಡನ್ ಕ್ವೀನ್ ಅಮೂಲ್ಯ, ಸಿಕ್ಕಾಪಟ್ಟೆ ಖುಷಿಪಟ್ಟಿದ್ದಾರೆ. 24ನೇ ಹುಟ್ಟುಹಬ್ಬಕ್ಕೆ ಮರ್ಸಿಡಿಸ್ ಮಹಾರಾಣಿಯಾಗಿದ್ದಾರೆ ಅಮೂಲ್ಯ.