ಬಿಗ್ಬಾಸ್ ಮೂಲಕ ಖ್ಯಾತಿಗೆ ಬಂದ ಒಳ್ಳೆ ಹುಡುಗ ಪ್ರಥಮ್ MLA ಆಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅವರಿಗೀಗ ಬಡ್ತಿ ಸಿಕ್ಕಿದೆ. MLA ಪ್ರಥಮ್ ಈಗ ಕ್ಯಾಬಿನೆಟ್ ಮಿನಿಸ್ಟರ್ ಆಗಿ, ನಗರಾಭಿವೃದ್ಧಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಕನ್ಫ್ಯೂಸ್ ಏನೂ ಬೇಡ. ಇದೆಲ್ಲಾ ಸಾಧ್ಯವಾಗಿರುವುದು ಪ್ರಥಮ್ ಅಭಿನಯಿಸುತ್ತಿರುವ ಎಂ.ಎಲ್.ಎ ಚಿತ್ರದಲ್ಲಿ. ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ನಗರಾಭಿವೃದ್ಧಿ ಸಚಿವ ಪ್ರಥಮ್ ಅವರ ದೃಶ್ಯಗಳನ್ನ ಚಿತ್ರೀಕರಿಸಲಾಗುತ್ತಿದೆ
‘ಮಜಾ ಟಾಕೀಸ್'ಗೆ ಸಂಭಾಷಣೆ ಬರೆಯುತ್ತಿದ್ದ ಮೌರ್ಯ ಅವರು ಕಥೆ ಬರೆದು ನಿರ್ದೇಶಿಸುತ್ತಿರುವ ಚಿತ್ರಕ್ಕೆ ಮಂಗಳೂರಿನ ಬೆಡಗಿ ಸೋಹಲ್ ಮಂತೆರೋ ನಾಯಕಿ. ಚಿತ್ರದ ಟೈಟಲ್ ಹೇಳುವಂತೆ ಇದೊಂದು ರಾಜಕೀಯದ ಕಥೆ. ಅಸಾಮಾನ್ಯ ಚಿಂತನೆ ಇರುವ ಸಾಮಾನ್ಯ ಹುಡುಗ ಅಚಾನಕ್ ಆಗಿ ಎಂ.ಎಲ್.ಎ ಆಗಿ, ಮಂತ್ರಿಯಾದ ನಂತರ ಏನಾಗುತ್ತೆ ಅನ್ನೋದೇ ಚಿತ್ರದ ಕಥೆ.