` ಹುಷಾರಾದ್ರು ಜಗ್ಗೇಶ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
jaggesh recovered from fever
Jaggesh Image

ನಟ ಜಗ್ಗೇಶ್ ಚಿನಕುರುಳಿಯಂತೆ ಸರಿದಾಡ್ತಾನೇ ಇರ್ತಾರೆ. ನಿಂತಲ್ಲಿ ನಿಲ್ಲಲ್ಲ..ಕುಂತಲ್ಲಿ ಕೂರಲ್ಲ ಇಂಥ ಜಗ್ಗೇಶ್‍ರನ್ನು ಎರಡು ದಿನ ಹಾಸಿಗೆ ಬಿಟ್ಟೇಳದಂತೆ ಕಟ್ಟಿ ಹಾಕಿದ್ದುದು ಜ್ವರ. ಎಂಥ ಜ್ವರವೆಂದರೆ, ಶೂಟಿಂಗ್‍ನಲ್ಲಿ ಪಾಲ್ಗೊಳ್ಳಲೂ ಆಗದಷ್ಟು ಜ್ವರ. ಹೀಗಾಗಿ ಕಾಮಿಡಿ ಕಿಲಾಡಿಗಳು ಶೂಟಿಂಗ್‍ನ್ನೇ ಕ್ಯಾನ್ಸಲ್ ಮಾಡಿಸಿದ್ದರು ಜಗ್ಗೇಶ್. 

ಈಗ ಗುಣಮುಖರಾಗಿದ್ದಾರೆ. ಎಂದಿನಂತೆ ಜಗ್ಗೇಶ್ ಸ್ಟೈಲಲ್ಲೇ ಜ್ವರವನ್ನು ಬೈದಿದ್ದಾರೆ. ವೈರಲ್ ಬಂದ ಮನುಷ್ಯ, ಅರಳಿದ ತಾವರೆ ಮುದುರಿತು ಎನ್ನುವ ಮಾತಿನಲ್ಲೇ ಅವರೆಷ್ಟು ಜ್ವರದಿಂದ ಬಳಲಿದ್ದರು ಎನ್ನುವುದು ಅರ್ಥವಾಗುತ್ತೆ. ಕೋಟಿ ಕೊಟ್ಟರೂ ಹೀಗೆ ಮುದುರಿ ಮಲಗೋದು ಬೇಡ ತಂದೆ ಎಂದು ಬೇಡಿಕೊಂಡಿದ್ಧಾರೆ ಜಗ್ಗೇಶ್. ಇದರ ಮಧ್ಯೆ ಅವರಿಗೆ ಪದೇ ಪದೇ ನೆನಪಾಗಿರೋದು ಮಾನವ ದೇಹವು ಮೂಳೆ ಮಾಂಸದ ತಡಿಕೆ ಹಾಡು..

Rambo 2 Movie Gallery

https://www.chitraloka.com/news/17774-heart-touching-song-on-mother-s-by-amma-i-love-you.html

Amma I Love You Movie Gallery