` ಕುರುಕ್ಷೇತ್ರ ಸೆಟ್​ಗೆ ರಾಮೋಜಿರಾವ್ ಹೊಗಳಿಕೆ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
kurukshetra set in ramoji studio
Kurukshetra Movie Image

ರಾಮೋಜಿರಾವ್, ಭಾರತೀಯ ಮಾಧ್ಯಮಲೋಕದ ರೂಪಟ್​ ಮರ್ಡೋಕ್ ಎಂದೇ ಹೆಸರಾದವರು. ಆಂಧ್ರಪ್ರದೇಶ ಚಿತ್ರೋದ್ಯಮದಲ್ಲೂ ರಾಮೋಜಿರಾವ್ ಅವರದ್ದು ದೊಡ್ಡ ಹೆಸರು. ರಾಮೋಜಿ ಫಿಲ್ಮ್ ಸಿಟಿ ಅವರ ಕನಸಿನ ಕೂಸು. ಈಗ ಕುರುಕ್ಷೇತ್ರ ಚಿತ್ರದ ಚಿತ್ರೀಕರಣ ನಡೆಯುತ್ತಿರುವುದು ಕೂಡಾ ಅಲ್ಲಿಯೇ.

ಅಂತಹ ಧೀಮಂತ ರಾಮೋಜಿರಾವ್, ಕುರುಕ್ಷೇತ್ರ ಚಿತ್ರದ ಸೆಟ್​ಗೆ ಭೇಟಿ ನೀಡಿ ಸಂಭ್ರಮಪಟ್ಟಿದ್ದಾರಂತೆ. ಕನ್ನಡದಲ್ಲಿ ಕುರುಕ್ಷೇತ್ರ ಚಿತ್ರ ಚಿತ್ರೀಕರಣವಾಗುತ್ತಿದೆ ಎಂದು ಗೊತ್ತಾಯ್ತು. ಕುತೂಹಲದಿಂದ ಸೆಟ್ ನೋಡಲು ಬಂದೆ. ಕುರುಕ್ಷೇತ್ರವನ್ನೇ ನೋಡಿದಂತಾಯ್ತು ಎಂದು ಹೊಗಳಿದ್ದಾರೆ ರಾಮೋಜಿರಾವ್.

ಅಷ್ಟೇ ಅಲ್ಲ, ಅದೇ ರಾಮೋಜಿ ಫಿಲ್ಮ್ ಸಿಟಿಯ ಬೇರೊಂದು ಕಡೆ ಜ್ಯೂ.ಎನ್​ಟಿಆರ್ ಅಭಿನಯದ ಚಿತ್ರದ ಚಿತ್ರೀಕರಣವೂ ನಡೆಯುತ್ತಿದೆ. ಅವರೂ ಕೂಡಾ ಸೆಟ್ ನೋಡಲು ಆಸಕ್ತಿ ತೋರಿದ್ದಾರಂತೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery